Chamarajanagar, ಏಪ್ರಿಲ್ 26 -- ಚಾಮರಾಜನಗರ: ನಾಲ್ಕು ವರ್ಷದ ಹಿಂದೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಿತ್ತಾಟದಿಂದ ಆಮ್ಲಜನಕ ಕೊರತೆಯಿಂದ 36 ಮಂದಿ ಮೃತಪಟ್ಟು, ಹಲವರು ತೊಂದರೆಗೆ ಒಳಗಾದ ಪ್ರಕರಣದ ನೋವು ಇನ್ನೂ ಮಾಸಿಲ್ಲ. ಅಧಿಕಾರಕ್ಕೆ ಬಂದರೆ ಮೃತಪಟ್ಟವರ ಕುಟುಂಬಗಳಿಗೆ ಕಾಯಂ ಉದ್ಯೋಗದ ಭರವಸೆ ನೀಡಿದ್ದ ಕಾಂಗ್ರೆಸ್‌ ತನ್ನ ಭರವಸೆಯನ್ನೇ ಮರೆತಿದೆ. ಅದರಲ್ಲೂ ಭಾರತ್‌ ಜೋಡೋ ಯಾತ್ರೆ ವೇಳೆ ಬಂದಿದ್ದ ಪಕ್ಷದ ನಾಯಕ ರಾಹುಲ್‌ಗಾಂಧಿ ಸೂಚನೆ ಕೊಟ್ಟರೂ ಸಂತ್ರಸ್ತ ಕುಟುಂಬಗಳನ್ನು ಕೈ ಹಿಡಿಯುವಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ವಿಫಲವಾಗಿದೆ. ಈ ವಿಚಾರವಾಗಿಯೇ ಚಾಮರಾಜನಗರದಲ್ಲಿ ಹೋರಾಟ ಮಾಡುತ್ತಿರುವ ಸಂತ್ರಸ್ತ ಕುಟುಂಬಸ್ಥರು ಈಗ ಹೊಸ ಮಾರ್ಗ ಹಿಡಿಯಲು ಮುಂದಾಗಿದ್ದಾರೆ.

ಬಿಜೆಪಿ ಸರ್ಕಾರ ಆಕ್ಸಿಜನ್ ನೀಡದೇ ನನ್ನ ಗಂಡನ ಸಾವಿಗೆ ಕಾರಣವಾಗಿದೆ. ಈ ಸರ್ಕಾರ ನನ್ನ ಸಾವಿಗೆ ಕಾರಣವಾಗುತ್ತದೆ.ನಾಲ್ಕು ವರ್ಷಗಳಿಂದ ತಿರುಗಿ ತಿರುಗಿ ಸಾಕಾಗಿದೆ. ನಾವೆಲ್ಲ ಸಾಯುವುದಕ್ಕೆ ಸಿದ್ದರಾಗಿದ್ದೇವೆ....