Mysuru, ಜನವರಿ 29 -- Mudukuthore Jatre 2025: ಕಾವೇರಿ ನದಿ ಎರಡು ಭಾಗವಾಗಿ ಹೋಳಾಗಿ ಮುಂದೆ ಕೂಡುವಂತಹ ಮನಮೋಹಕ ವಾತಾವರಣ ಹೊಂದಿರುವ ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಐತಿಹಾಸಿಕ ಮುಡುಕುತೊರೆ ಜಾತ್ರಾ ಮಹೋತ್ಸವ ಜನವರಿ 31ರಿಂದ ಫೆಬ್ರವರಿ 16ರವರೆಗೆ ನಡೆಯಲಿದೆ. ಜನಗಳ ಜಾತ್ರೆಗೆ ಮುಡುಕುತೊರೆ ಜನಪ್ರಿಯ. ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು ಭಾಗದಿಂದಲೂ ರೈತರು ಇಲ್ಲಿಗೆ ರಾಸುಗಳನ್ನು ತಂದು ಮಾರಾಟ ಮಾಡುವುದು ವಾಡಿಕೆ. ಇದನ್ನು ಮುಡುಕುತೊರೆ ರಾಸುಗಳ ಜಾತ್ರೆಯೂ ಎಂದು ಕರೆಯಲಾಗುತ್ತೆದೆ. ಮುಡುಕತೊರೆಯ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ಮೈಸೂರು ಭಾಗದ ಹಲವು ಕುಟುಂಬಗಳ ಆರಾಧ್ಯದೈವ, ಬೆಟ್ಟದ ಮೇಲೆ ಇರುವ ಈ ದೇಗುಲಕ್ಕೆ ತನ್ನದೇ ಆದ ಐತಿಹ್ಯವಿದೆ.

ಜನವರಿ 31 ರಿಂದ ಫೆಬ್ರವರಿ 16ರವರೆಗೆ ಮುಡುಕುತೊರೆ ಜಾತ್ರಾ ಮಹೋತ್ಸವ ನಡೆಯಲಿದೆ, ಫೆಬ್ರವರಿ 7 ರಂದು ರಥೋತ್ಸವ, ಫೆಬ್ರವರಿ 10ಕ್ಕೆ ತೆಪ್ಪೋತ್ಸವ ಸಮಾರಂಭ. 17 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಸಲು ತೀರ್ಮಾನಿಸಲಾಗಿದೆ. ಇಲ್ಲಿಗೆ ಬರುವ ಭಕ್ತರಿಗೆ ಕಾವೇರಿ ನದಿ...