Bengaluru, ಏಪ್ರಿಲ್ 24 -- ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗಿ, ಗಗನಕ್ಕೇರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಸಾಮಾನ್ಯ ಜನರಿಗೆ ಹೊಸ ಆಭರಣಗಳನ್ನು ಖರೀದಿಸುವುದು ಕಷ್ಟವಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಹಳೆಯ ಚಿನ್ನದ ಆಭರಣಗಳನ್ನು ಧರಿಸುವ ಮೂಲಕ ನಿಮ್ಮ ಇಚ್ಚೆಯನ್ನು ಪೂರೈಸಿಕೊಳ್ಳಬಹುದು. ಕಾರ್ಯಕ್ರಮಗಳಿಗೆ ಹೋಗುವಾಗ ಹಳೆಯ ಚಿನ್ನ ಎಂದು ಬೇಸರಿಸದೆ, ಅದನ್ನು ಧರಿಸಬಹುದು. ಆದರೆ ಹೆಚ್ಚಿನ ಚಿನ್ನದ ಆಭರಣಗಳು ಹಳೆಯದಾದಂತೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ ಮತ್ತು ಅದರ ಹೊಳಪು ಮಸುಕಾಗುತ್ತದೆ. ಅಂದಹಾಗೆ, ಚಿನ್ನವನ್ನು ಶುಚಿಗೊಳಿಸುವ ಮೂಲಕ ಅದನ್ನು ಮತ್ತೆ ಹೊಳಪುಗೊಳಿಸಬಹುದು. ಆದರೆ ಚಿನ್ನದ ಅಂಗಡಿಗೆ ಹೋಗಿ ಅದನ್ನು ಪಾಲಿಶ್ ಮಾಡುವುದು ಕಷ್ಟದ ಕೆಲಸ. ಆದ್ದರಿಂದ ಹಳೆಯ ಚಿನ್ನದ ಆಭರಣಗಳಿಗೆ ಯಾವುದೇ ರಾಸಾಯನಿಕಗಳಿಲ್ಲದೆ ಮನೆಯಲ್ಲಿ ಹೊಸ ಹೊಳಪನ್ನು ನೀಡಬಹುದು. ಅದಕ್ಕಾಗಿ ಈ ಸರಳ ಟಿಪ್ಸ್ ಅನುಸರಿಸಿ.

ಚಿನ್ನದ ಆಭರಣಗಳನ್ನು ಹೊಳಪುಗೊಳಿಸಲು ರಾಸಾಯನಿಕಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದೆ. ಆದರೆ...