ಭಾರತ, ಮೇ 10 -- ಮರಾಠಿಯ ಆಚಾರ್ಯ ಅತ್ರೆ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ 'ಶ್ಯಾಮಚಿ ಆಯಿ' ಚಿತ್ರದಲ್ಲಿ ಬಾಲಕ ಶ್ಯಾಮ್ ಪಾತ್ರದಲ್ಲಿ ನಟಿಸುವ ಮೂಲಕ ಎಲ್ಲರ ಹೃದಯ ಗೆದ್ದಿದ್ದ ಹಿರಿಯ ರಂಗಭೂಮಿ ಕಲಾವಿದ ಮಾಧವ್ ವಾಜೆ ಇತ್ತೀಚೆಗೆ (ಮೇ 7) ನಿಧನರಾಗಿದ್ದಾರೆ. ಅವರಿಗೆ ಪತ್ನಿ ಮತ್ತು ಪುತ್ರ, ನಿರ್ದೇಶಕ ಅಮಿತ್‌ ವಾಜೆ ಇದ್ದಾರೆ. ಮೃತರ ಅಂತ್ಯಕ್ರಿಯೆ ಇತ್ತೀಚೆಗೆ ಪುಣೆಯಲ್ಲಿ ನೆರವೇರಿಸಲಾಗಿದೆ.

ಮಾಧವ್ ವಾಝೆ 1953ರ 'ಶ್ಯಾಮ್ಚಿ ಆಯಿ' ಚಿತ್ರದಲ್ಲಿ ಬಾಲ ಕಲಾವಿದನಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಆ ಚಿತ್ರದಲ್ಲಿ ಮಾಧವ್ ಅವರ ಬಾಲಕ ಶ್ಯಾಮ್ ಪಾತ್ರ ಬಹಳ ಜನಪ್ರಿಯವಾಗಿತ್ತು. ಅದಾದ ಬಳಿಕ 2009ರಲ್ಲಿ ತೆರೆಗೆ ಬಂದ '3 ಈಡಿಯಟ್ಸ್' ಚಿತ್ರದಲ್ಲಿ ನಟಿಸಿದರು. ಆದರೆ ಸಿನಿಮಾಗಳಿಗಿಂತ ಹೆಚ್ಚು ರಂಗಭೂಮಿಯಲ್ಲಿಯೇ ಮಾಧವ್ ಸಕ್ರಿಯರಾಗಿದ್ದರು.

ನಾಟಕದ ಶಿಕ್ಷಕ, ನಾಟಕ ನಿರ್ದೇಶನದ ಜತೆಗೆ ನಾಟಕ ವಿಮರ್ಶಕರಾಗಿಯೂ ಮಾಧವ್‌ ವಾಝೆ ಗುರುತಿಸಿಕೊಂಡಿದ್ದಾರೆ. ಕಲಾ ಅಕಾಡೆಮಿ (ಗೋವಾ) ನಾಟಕ ವಿಭಾಗದಲ್ಲಿ ಸಂದರ್ಶಕ ...