ಭಾರತ, ಮೇ 3 -- ಬೆಂಗಳೂರು: ಜನಗಣತಿಯ ಭಾಗವಾಗಿ ನಡೆಸಿದ ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್ ಪ್ರಕಾರ, ಕರ್ನಾಟಕದಲ್ಲಿನ ಪ್ರತೀ ವಯಸ್ಕ ಮಹಿಳೆಯ ಸರಾಸರಿ ಮಕ್ಕಳ ಸಂಖ್ಯೆ ಅಥವಾ ಫಲವಂತಿಕೆ ದರ 1.6 ಇದೆ. ಫಲವಂತಿಕೆ ದರ ಕಡಿಮೆಯಾಗಿರುವುದನ್ನು ಈ ಸಮೀಕ್ಷೆಯು ಸೂಚಿಸಿದೆ. ಇದೀಗ ದೇಶವು ರಾಷ್ಟ್ರೀಯ ಬಂಜೆತನ ಜಾಗೃತಿ ಸಪ್ತಾಹ ಆಚರಿಸುತ್ತಿದ್ದು, ಅದರ ಭಾಗವಾಗಿ ಫಲವಂತಿಕೆ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಉಂಟು ಮಾಡುವ ಅಗತ್ಯವಿದೆ. ಅದರಲ್ಲೂ ಬಂಜೆತನ ಸಮಸ್ಯೆ ಎದುರಿಸುತ್ತಿರುವ ದಂಪತಿಗಳಿಗೆ ಭಾವನಾತ್ಮಕ ಬೆಂಬಲ ನೀಡುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಭಾವನಾತ್ಮಕ ಬೆಂಬಲ ದೊರೆತರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಲಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಲ್ಲಿ ಪ್ರತೀ 6 ದಂಪತಿಗಳಲ್ಲಿ ಒಂದು ದಂಪತಿ ಬಂಜೆತನ ಸಮಸ್ಯೆ ಎದುರಿಸುತ್ತಾರೆ. ಒಂದು ವರ್ಷದವರೆಗೆ ನಿಯಮಿತವಾಗಿ ಯಾವುದೇ ರಕ್ಷಣೆಯಿಲ್ಲದೆ ನಡೆಸುವ ದೈಹಿಕ ಸಂಪರ್ಕದ ನಂತರವೂ ಗರ್ಭಧಾರಣೆಯಾಗದೇ ಇದ್ದರೆ ಅದನ್ನು ಬಂಜೆತನ ಎಂದೇ ಪರಿಗಣಿಸಲಾಗುತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.