ಭಾರತ, ಫೆಬ್ರವರಿ 12 -- ಉತ್ತರಾಖಂಡದಲ್ಲಿ ನಡೆಯುತ್ತಿರುವ 38ನೇ ಆವೃತ್ತಿಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯಗಳು ಪದಕ ಬೇಟೆ ಮುಂದುವರೆಸಿವೆ. ಹಲವು ವಿಭಾಗಗಳಲ್ಲಿ ಹೊಸ ದಾಖಲೆಗಳ ಜೊತೆಗೆ ಪ್ರತಿಭಾವಂತರೂ ಹೊರಬರುತ್ತಿದ್ದಾರೆ. ಅಥ್ಲೆಟಿಕ್ಸ್‌ನಿಂದ ಹಿಡಿದು ಜಲ ಕ್ರೀಡೆ ಮತ್ತು ಫೆನ್ಸಿಂಗ್‌ವರೆಗೆ, ವಿವಿಧ ರಾಜ್ಯಗಳ ಸ್ಪರ್ಧಿಗಳು ಅದ್ಭುತ ಪ್ರದರ್ಶನ ನೀಡುತ್ತಿವೆ. ಇದು ಸ್ಪರ್ಧೆಯ ಕೌತುಕತೆಯನ್ನು ಹೆಚ್ಚಿಸಿದೆ. ಪುರುಷರ ಜಾವೆಲಿನ್ ಎಸೆತದಲ್ಲಿ ಉತ್ತರ ಪ್ರದೇಶದ ಸಚಿನ್ ಯಾದವ್ 84.39 ಮೀಟರ್ ದೂರ ಎಸೆದು ಇತಿಹಾಸ ನಿರ್ಮಿಸಿದರು. ಇದರೊಂದಿಗೆ 10 ವರ್ಷಗಳ ಹಳೆಯ ಕೂಟ ದಾಖಲೆಯನ್ನು ಮುರಿದು ಚಿನ್ನದ ಪದಕ ಗೆದ್ದರು. ಏತನ್ಮಧ್ಯೆ, ಉತ್ತರಾಖಂಡದ ಸ್ಟಾರ್ ಓಟಗಾರ್ತಿ ಅಂಕಿತಾ ಧ್ಯಾನಿ 5000 ಮೀಟರ್ ಓಟದಲ್ಲಿ ಗೆದ್ದು ಮತ್ತೊಂದು ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಅಥ್ಲೆಟಿಕ್ಸ್‌ನಲ್ಲಿ, ಹರಿಯಾಣದ ಪೂಜಾ ಮಹಿಳೆಯರ ಹೈಜಂಪ್ ಸ್ಪರ್ಧೆಯಲ್ಲಿ 1.84 ಮೀಟರ್ ಎತ್ತರ ಜಿಗಿಯುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದರು. ಅವರು ಸ್ವಪ್ನಾ ಬರ್ಮನ...