ಭಾರತ, ಏಪ್ರಿಲ್ 4 -- ಹಾರ್ವೆಸ್ಟ್‌ ಟೆನಿಸ್‌ ಅಕಾಡೆಮಿ ವತಿಯಿಂದ ನಡೆದ ಹಾರ್ವೆಸ್ಟ್‌ ರಾಷ್ಟ್ರೀಯ ಸರಣಿ ಟೆನಿಸ್‌ ಟೂರ್ನಮೆಂಟ್‌ನಲ್ಲಿ ಪದ್ಮಪ್ರಿಯಾ ಫೈನಲ್‌ ಪ್ರವೇಶಿಸಿದರು. ಅವರು ಫೈನಲ್‌ನಲ್ಲಿ ಆಂಧ್ರಪ್ರದೇಶದ ಎದುರಾಳಿಯನ್ನು ಮಣಿಸಿದರು.

ಆಂಧ್ರ ಪ್ರದೇಶದ ಪರಿಣಿತಾ ಅವರನ್ನು 6-2, 2-6, 6-1 ಅಂತರದಿಂದ ಸೋಲಿಸಿ ಮೊದಲ ಸ್ಥಾನ ಪಡೆದಿದ್ದಾರೆ.

ಗುರುವಾರವಷ್ಟೇ (ಏಪ್ರಿಲ್‌ 3) ಅವರು 14 ವರ್ಷದೊಳಗಿನವರ ಡಬಲ್ಸ್‌ನಲ್ಲಿ ರನ್ನರ್ ಅಪ್ ಆಗಿದ್ದರು.

ಪದ್ಮಪ್ರಿಯಾ ಮೈಸೂರಿನ ಯುವ ಟೆನಿಸ್‌ ಆಟಗಾರ್ತಿ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಇರಾದೆ ಇರುವ ಆಟಗಾರ್ತಿ, ಈಗಾಗಲೇ ರಾಷ್ಟ್ರಮಟ್ಟದ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಪದ್ಮಪ್ರಿಯಾ ರಮೇಶ್ ಕುಮಾರ್ ಪ್ರಸ್ತುತ ಮೈಸೂರಿನ ಎಕ್ಸೆಲ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದಾರೆ. ಅವರು ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ. ಮಾಲತಿ ಪ್ರಿಯಾ ಮತ್ತು ಅರಣ್ಯ ಸಂರಕ್ಷಣಾಧಿಕಾರಿ (ಪ್ರಾಜೆಕ್ಟ್ ಟೈಗರ್) ಡಾ. ಪಿ. ರಮೇಶ್ ಕುಮಾರ್ ಅವರ ಪುತ್ರಿ.

Pub...