ಭಾರತ, ಮಾರ್ಚ್ 23 -- ಐಪಿಎಲ್‌ 2025ರ ಆವೃತ್ತಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಗೆಲುವಿನ ಆರಂಭ ಪಡೆದಿದೆ. ತವರು ಮೈದಾನದ ರಾಜೀವ್‌ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 44 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಎಂದಿನಂತೆ ಈ ಬಾರಿಯೂ ತಮ್ಮ ಸ್ಫೋಟಕ ಬ್ಯಾಟಿಂಗ್‌ ಅಭ್ಯಾಸ ಮುಂದುವರೆಸಿದ ಎಸ್‌ಆರ್‌ಎಚ್‌, ದಾಖಲೆ ಮೇಲೆ ದಾಖಲೆ ನಿರ್ಮಾಣದೊಂದಿಗೆ ಸಿಡಿದಿದೆ. ಐಪಿಎಲ್‌ ಇತಿಹಾಸದಲ್ಲೇ ಎರಡನೇ ಗರಿಷ್ಠ ಮೊತ್ತ ದಾಖಲಿಸುವ ಮೂಲಕ ಪಂದ್ಯದ ಆರಂಭದಲ್ಲೇ ದಾಖಲೆ ನಿರ್ಮಿಸಿದ ತಂಡ, ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್‌, ಇಶಾನ್‌ ಕಿಶನ್‌ ಚೊಚ್ಚಲ ಐಪಿಎಲ್‌ ಶತಕದ ನೆರವಿನಿಂದ 6 ವಿಕೆಟ್‌ ಕಳೆದುಕೊಂಡು ದಾಖಲೆಯ 286 ರನ್‌ ಗಳಿಸಿತು. ಇದು ಐಪಿಎಲ್‌ನ ಎರಡನೇ ಗರಿಷ್ಠ ಮೊತ್ತ. ಕಳೆದ ಆವೃತ್ತಿಯಲ್ಲಿ ಇದೇ ಎಸ್‌ಆರ್‌ಎಚ್‌ ತಂಡವು 287 ರನ್‌ ಗಳಿಸಿರುವುದು ಐಪಿಎಲ್‌ ಇತಿಹಾಸದಲ್ಲಿ ತಂಡವೊಂದರ ಗರಿಷ್ಠ ಮೊತ್ತವಾಗಿದೆ. ಇದೀಗ ಎರಡನೇ ಸ್ಥಾನದಲ್...