ಭಾರತ, ಏಪ್ರಿಲ್ 18 -- ರಾಯಚೂರು: ಅವರು ದೂರದ ಆಂಧ್ರಪ್ರದೇಶದ ಹಿಂದೂಪುರದಿಂದ ಕರ್ನಾಟಕದ ಯಾದಗಿರಿ ಜಿಲ್ಲೆಗೆ ಹೊರಟಿದ್ದರು. ಕುರಿ ಸಂತೆಗೆಂದು ಅವರ ಪಯಣ ಸಾಗಿತ್ತು. ಕುರಿಗಳನ್ನು ಖರೀದಿಸಿಕೊಂಡು ತಮ್ಮೂರಲ್ಲಿ ಮಾರಾಟ ಮಾಡುವವರು ಇದ್ದರು. ಇನ್ನೇನು ಸ್ಥಳ ತಲುಪುವುದು ಸ್ವಲ್ಪವೇ ದೂರವಿತ್ತು. ಆದರೆ ಮಾರ್ಗ ನಡುವೆಯೇ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರ ಜೀವವೇ ಹೋಗಿತ್ತು. ಇಂತಹ ದುರ್ಘಟನೆ ನಡೆದಿರುವುದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ ಗ್ರಾಮದ ಬಳಿ. ಅದೂ ಶುಕ್ರವಾರ ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿದ ವಾಹನ ತಡೆಗೋಡೆಗೆ ಡಿಕ್ಕಿಹೊಡೆದಿದ್ದು. ಡಿಕ್ಕಿ ಹೊಡೆದ ರಭಸಕ್ಕೆ ವಾಹನದಲ್ಲಿದ್ದ ಹಿಂದೂಪುರ ಮೂಲದ ನಾಲ್ವರು ಮೃತಪಟ್ಟರು.

ಅಪಘಾತದಲ್ಲಿ ಮೃತಪಟ್ಟವರನ್ನು ನಾಗರಾಜ್, ಸೋಮ, ನಾಗಭೂಷಣ, ಮುರಳಿ ಎಂದು ಗುರುತಿಸಲಾಗಿದೆ. ಗುರುವಾರ ಸಂಜೆಯೇ ಹಿಂದೂಪುರದಿಂದ ಬೊಲೆರೋ ಪಿಕ್‌ ಅಪ್‌ ವಾಹನದಲ್ಲಿ ಹೊರಟಿದ್ದ ನಾಲ್ವರು ಶುಕ್ರವಾರ ಬೆಳಿಗ್ಗೆ ಯಾದಗಿರಿ ಜಿಲ್ಲೆಯ ಶಹಾಪುರ ತಲುಪಬೇಕಿತ್ತು. ಅಲ್ಲಿನ ಸಂತೆಯಲ್ಲಿ...