ಭಾರತ, ಮಾರ್ಚ್ 28 -- ನಟ ರಾಮ್ ಚರಣ್ ಮಾರ್ಚ್ 27 ರಂದು 40ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ರಾಮ್‌ ಚರಣ್ ಅಭಿಮಾನಿಗಳಿಗೆ ಸಂತಸವಾಗುವ ರೀತಿಯಲ್ಲಿ ಅವರ ಮುಂಬರುವ ಸಿನಿಮಾ 'ಪೆದ್ದಿ' ಫಸ್ಟ್‌ ಲುಕ್ ಬಿಡುಗಡೆಯಾಗಿದೆ. ಈ ಹಿಂದೆ ರಂಗಸ್ಥಲ ಸಿನಿಮಾದಲ್ಲಿ ರಾಮ್‌ ಚರಣ್‌ ಹಳ್ಳಿಗಾಡಿನ ವ್ಯಕ್ತಿಯ ರೀತಿಯ ಪಾತ್ರವನ್ನು ನಿರ್ವಹಿಸಿದ್ದರು. ಇದೀಗ ಮತ್ತೆ ಈ ಸಿನಿಮಾದಲ್ಲೂ ಹಳ್ಳಿ ಯುವಕನ ಪಾತ್ರದಲ್ಲಿ ರಾಮ್‌ ಚರಣ್ ಕಾಣಿಸಿಕೊಳ್ಳಲಿದ್ದಾರೆ. ಫಸ್ಟ್‌ ಲುಕ್‌ನಲ್ಲಿಯೇ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ, ಈಗ ಚರ್ಚೆಯಾಗುತ್ತಿರುವ ಮೂಲ ಸಂಗತಿ ಏನೆಂದರೆ ಪುಷ್ಪಾ: ದಿ ರೈಸ್ ಚಿತ್ರದ ಅಲ್ಲು ಅರ್ಜುನ್ ಅವರ ನೋಟದೊಂದಿಗೆ ರಾಮ್‌ ಚರಣ್ ಅವರ ಈ ಸಿನಿಮಾ ನೋಟ ಕೂಡ ಹೋಲಿಕೆಯಾಗುತ್ತಿದೆ.

ಪೆದ್ದಿ ಚಿತ್ರದ ರಾಮ್ ಅವರ ಫಸ್ಟ್ ಲುಕ್‌ನ ಎರಡು ಪೋಸ್ಟರ್‍‌ಗಳನ್ನು ಅವರ ಹುಟ್ಟು ಹಬ್ಬದಂದು ಗುರುವಾರ ಬಿಡುಗಡೆ ಮಾಡಲಾಗಿದೆ. ಒಂದು ಪೋಸ್ಟರ್‍‌ನಲ್ಲಿ ಅವರು ಬೀಡಿ ಹೊತ್ತಿಸಿಕೊಂಡು ಕ್ಯಾಮೆರಾವನ್ನು ನೋಡುತ್ತಿರುವುದನ್ನು ಕಾಣಬಹುದು. ಎರಡನೇ ಪೋಸ್ಟರ್‍‌...