ಭಾರತ, ಮಾರ್ಚ್ 27 -- Ram charan Birthday: ಟಾಲಿವುಡ್‌ ಸ್ಟಾರ್‌ ನಟ ರಾಮ್‌ ಚರಣ್‌ ತೇಜ ಅವರಿಗಿಂದು (ಮಾ. 27) ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದ ಪ್ರಯುಕ್ತ ಅವರ ಮುಂಬರುವ RC16 ಸಿನಿಮಾ ತಂಡದಿಂದ ಫ್ಯಾನ್ಸ್‌ಗೆ ಸರ್ಪ್ರೈಸ್‌ ಸಿಕ್ಕಿದೆ. ಈ ವರೆಗೂ ಕೌತುಕವಾಗಿಯೇ ಉಳಿದಿದ್ದ RC16 ಚಿತ್ರದ ಶೀರ್ಷಿಕೆ ರಿವೀಲ್‌ ಆಗಿದ್ದು, ಹೊಸ ಮೇಕ್‌ಓವರ್‌ ಜತೆಗೆ ರಾಮ್‌ಚರಣ್‌ ರಗಡ್‌ ಆಗಿಯೇ ಎದುರಾಗಿದ್ದಾರೆ. ಈ ಮಾಸ್‌ ಆಕ್ಷನ್‌ ಚಿತ್ರಕ್ಕೆ ʻಪೆದ್ದಿʼ ಎಂಬ ಶೀರ್ಷಿಕೆ ಇಡಲಾಗಿದೆ. ಉದ್ದ ಮೀಸೆ, ಹರಡಿದ ಗಡ್ಡದೊಂದಿಗೆ ಬೀಡಿ ಸೇದುತ್ತಿರುವ ಲುಕ್‌ನಲ್ಲಿ ರಾಮ್‌ಚರಣ್‌ ಮಾಸ್ ಲುಕ್‌ನಲ್ಲಿ ಕಂಡಿದ್ದಾರೆ.

ರಾಮ್‌ ಚರಣ್‌ ಬರ್ತ್‌ಡೇಗೆ ಪೆದ್ದಿ ಚಿತ್ರದಿಂದ ಒಟ್ಟು ಎರಡು ಪೋಸ್ಟರ್‌ಗಳು ಬಿಡುಗಡೆ ಆಗಿವೆ. ಒಂದರಲ್ಲಿ ಬೀಡಿ ಸೇದುತ್ತಿದ್ದರೆ, ಇನ್ನೊಂದರಲ್ಲಿ ಕೈಲ್ಲಿ ಬ್ಯಾಟ್‌ ಹಿಡಿದು, ಗಂಭೀರ ನೋಟದಲ್ಲಿ ಪೋಸ್‌ ನೀಡಿದ್ದಾರೆ. ಸದ್ಯ ಈ ಎರಡು ಪೋಸ್ಟರ್‌ಗಳೀಗ ಸೋಷಿಯಲ್‌ ಮೀಡಿಯಾದಲ್ಲಿ ಫ್ಯಾನ್ಸ್‌ಗೆ ಹಬ್ಬದೂಟ ಹಾಕಿಸಿವೆ. ರಾಮ್‌ ಚರಣ್‌ ...