ಭಾರತ, ಏಪ್ರಿಲ್ 16 -- ಯುದ್ಧಕಾಂಡದ ಕಥೆ: ಸೀತೆಯನ್ನು ಹುಡುಕಲು ಆಂಜನೇಯ ಮೊದಲಾದ ವಾನರ ವೀರರು ದಕ್ಷಿಣ ದಿಕ್ಕಿಗೆ ಹೋಗಿರುತ್ತಾರೆ. ಅವರು ಇನ್ನೂ ಬರಲಿಲ್ಲ ಎಂದು ಶ್ರೀರಾಮ-ಲಕ್ಷ್ಮಣರು ಚಡಪಡಿಸುತ್ತಿರುತ್ತಾರೆ. ಹನುಮಂತ ಅದೇ ವೇಳೆಗೆ ಕಿಷ್ಕಿಂಧೆಗೆ ಬರುತ್ತಾನೆ. ಅವನನ್ನು ಕಂಡು ಎಲ್ಲರೂ ಸಂತೋಷಗೊಳ್ಳುತ್ತಾರೆ. ರಾಮ-ಲಕ್ಷ್ಮಣರಿಗೆ ನಮಸ್ಕಾರ ಮಾಡಿದ ನಂತರ ಅಶೋಕ ವನದಲ್ಲಿ ಸೀತಾದೇವಿಯನ್ನು ನೋಡಿದ್ದು, ಮಾತನಾಡಿಸಿದ್ದು ಮತ್ತು ರಾಮನು ರಾವಣನ ಜೊತೆ ಯುದ್ದ ಮಾಡಿ ತನ್ನನ್ನು ಅಯೋಧ್ಯೆಗೆ ಕರೆದೊಯ್ಯಬೇಕೆಂಬ ಸೀತಾಮಾತೆಯ ಮನದ ಆಶಯವನ್ನು ಹನುಮಂತ ತಿಳಿಸುತ್ತಾನೆ.

ಸೀತಾದೇವಿಯು ನೀಡಿದ ಚೂಡಾಮಣಿಯನ್ನು ರಾಮ-ಲಕ್ಷ್ಮಣರಿಗೆ ತೋರಿಸುತ್ತಾನೆ. ಇದರಿಂದ ಸಂತಸಗೊಂಡ ರಾಮ-ಲಕ್ಷ್ಮಣರು ಲಂಕೆಯ ಮೇಲೆ ದಾಳಿ ಮಾಡಲು ಸಿದ್ಧತೆ ನಡೆಸಿಕೊಳ್ಳುತ್ತಾರೆ. ಶ್ರೀರಾಮನು ಸುಗ್ರೀವನ ಸಹಾಯವನ್ನು ಕೇಳಿದಾಗ ಇಡೀ ರಾಜ್ಯದ ಜನರೇ ರಾಮನ ಹಿಂದೆ ಸಹಾಯ ನೀಡಲು ಸಿದ್ದರಾಗಿ ನಿಲ್ಲುತ್ತಾರೆ. ಹನುಮಂತನಿಂದ ಲಂಕೆಗೆ ಇದ್ದ ರಕ್ಷಣೆಯ ತಂತ್ರಗಳ ಬಗ್ಗೆ ರಾಮನು ತಿಳಿದುಕೊ...