ಭಾರತ, ಏಪ್ರಿಲ್ 16 -- ಬಾಲಕಾಂಡದ ಕಥೆ: ರಾಮಾಯಣದ ಎಂಬ ಮಹಾಕಾವ್ಯಕ್ಕೆ ಬುನಾದಿ ಹಾಕಿಕೊಡುವ ಮೊದಲ ಘಟ್ಟವೇ ಬಾಲಕಾಂಡ. ಇದು ರಾಮಾಯಣದ ಮುಂದಿನ ಹಲವು ಘಟನೆಗಳಿಗೆ ಮುನ್ನುಡಿ ಬರೆಯುತ್ತದೆ. ವಿಶ್ವದಲ್ಲಿ ಮೊದಲು ಜನಿಸಿದ್ದು ಪಿತಾಮಹನಾದ ಬ್ರಹ್ಮದೇವ. ಬ್ರಹ್ಮನ ಮಗನೇ ಮರೀಚಿ. ತದನಂತರ ಮರೀಚಿಯ ಮಗನಾದ ಕಶ್ಯಪನು ದಕ್ಷನ ಮಕ್ಕಳಾದ ಅದಿತಿ ಮತ್ತು ದಿತಿ ಮುಂತಾದವರನ್ನು ವಿವಾಹವಾಗುತ್ತಾನೆ. ಅದಿತಿಯ ಮಕ್ಕಳನ್ನು ಆದಿತ್ಯರು ಎಂದು ಕರೆಯುತ್ತಾರೆ. ಇವರಲ್ಲಿ ಒಬ್ಬನೇ ಸೂರ್ಯದೇವ. ಈ ಪರಂಪರೆಯಲ್ಲಿ ಬರುವವನೇ ಕೋಸಲ ದೇಶದ ರಾಜನಾದ ದಶರಥ ಮಹಾರಾಜ. ಈತನು ಇಕ್ಷ್ವಾಕು ವಂಶಕ್ಕೆ ಸೇರಿದವನಾಗಿರುತ್ತದೆ.

ಕೋಸಲ ದೇಶದ ರಾಜಧಾನಿಯೇ ಅಯೋಧ್ಯೆ. ದಶರಥನ ಬಳಿ ಚತುರಂಗ ಸೇನೆ ಇತ್ತು. ಇವನ ಆಸ್ಥಾನದಲ್ಲಿ ಒಟ್ಟು ಎಂಟು ಜನ ಮಂತ್ರಿಗಳಿರುತ್ತಾರೆ. ಜಗತ್ಪ್ರಸಿದ್ಧ ಪುರೋಹಿತರು ಸಹ ಇರುತ್ತಾರೆ. ಇವರೆಲ್ಲರ ಮಾರ್ಗದರ್ಶನದಲ್ಲಿ ದಶರಥನು ನ್ಯಾಯ, ನೀತಿ, ಧರ್ಮದಿಂದ ರಾಜ್ಯವನ್ನು ಆಳುವುದಲ್ಲದೆ, ಸತ್ಯ ಪರಿಪಾಲಕನಾಗಿರುತ್ತಾನೆ. ದೇವಲೋಕದ ಐರಾವತ ಸಹ ಇವನ ಬಳಿ ಇರ...