ಭಾರತ, ಏಪ್ರಿಲ್ 21 -- ರಾಕಿಂಗ್ ಸ್ಟಾರ್ ಯಶ್‌ ಸದ್ಯ ಶೂಟಿಂಗ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಒಂದರ ಹಿಂದೆ ಒಂದು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಟಾಕ್ಸಿಕ್‌' ಸಿನಿಮಾದ ಪ್ರಮುಖ ಭಾಗಗಳ ಚಿತ್ರೀಕರಣ ಮುಗಿಸಿದ್ದು, ಇದೇ ವಾರದಲ್ಲಿ ರಾಮಾಯಣ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ ಯಶ್‌. ರಾಮಾಯಣ ಭಾಗ-1ರ ಶೂಟಿಂಗ್ ಮುಂಬೈನಲ್ಲಿ ನಡೆಯಲಿದೆ.

ಯಶ್‌, ರಣಬೀರ್ ಕಪೂರ್‌, ಸಾಯಿಪಲ್ಲವಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ರಾಮಾಯಣ ಚಿತ್ರದ ಬಗ್ಗೆ ದೇಶದಾದ್ಯಂತ ಸಿನಿ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ಇದೀಗ ಚಿತ್ರದ ಶೂಟಿಂಗ್‌ನಲ್ಲಿ ಯಶ್ ಭಾಗವಹಿಸುವ ಹಿನ್ನೆಲೆ, ಅದಕ್ಕೂ ಮೊದಲು ಉಜ್ಜಯಿನಿ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯಲಿದ್ದಾರೆ. ಈ ವಾರದಲ್ಲೇ ಯಶ್‌ ರಾಮಾಯಣ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದು, ಅಭಿಮಾನಿಗಳು ಈ ಸಿನಿಮಾ ಆದಷ್ಟು ಬೇಗ ತೆರೆ ಮೇಲೆ ಬರಲಿ ಎಂದು ಹಾರೈಸುತ್ತಿದ್ದಾರೆ.

ಭಾರತದ ಪ್ರಸಿದ್ಧ ಮಹಾಕಾವ್ಯ...