ಭಾರತ, ಏಪ್ರಿಲ್ 7 -- ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ಬಿಗ್‌ಬಾಸ್ ಸೀಸನ್ 11ರಲ್ಲೂ ಭಾಗವಹಿಸಿ, ಕನ್ನಡಿಗರ ಮನ ಗೆದ್ದಿದ್ದಾರೆ. ಬಿಗ್‌ಬಾಸ್ ಬಳಿಕ ನಟನೆಯಿಂದ ವಿರಾಮ ಪಡೆದಿರುವ ಆಕೆ ಸದ್ಯ ತಮ್ಮ ಫ್ರಿ ಟೈಮ್ ಎಂಜಾಯ್ ಮಾಡುತ್ತಿದ್ದಾರೆ. ಈ ನಡುವೆ ರಾಮನವಮಿಗೆ ಲಂಗ ದಾವಣಿ ತೊಟ್ಟು ಅಲಂಕಾರ ಮಾಡಿಕೊಂಡಿರುವ ಆಕೆ ಫೋಟೊಗುಚ್ಛವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕೆಂಪು ಬಣ್ಣದ ಲಂಗ ದಾವಣಿ ಜೊತೆ ಕೊರಳು ತುಂಬುವ ನೆಕ್ಲೇಸ್‌, ಕಿವಿಯೋಲೆ, ಬಳೆಗಳನ್ನು ಧರಿಸಿ ಸಾಂಪ್ರದಾಯಿಕ ರೀತಿಯಲ್ಲಿ ಅಲಂಕಾರ ಮಾಡಿಕೊಂಡಿರುವ ಮೋಕ್ಷಿತಾ ದಂತದ ಗೊಂಬೆಯಂತೆ ಕಾಣುತ್ತಿದ್ದಾರೆ.

ರಾಮನವಮಿ ಪ್ರಯುಕ್ತ ಸಾಂಪ್ರದಾಯಿಕ ದಿರಿಸು ತೊಟ್ಟು ಫೋಟೊಶೂಟ್ ಮಾಡಿಸಿ, ಸಮಸ್ತ ನಾಡಿನ ಜನತೆಗೆ ಶ್ರೀರಾಮನವಮಿಯ ಶುಭಾಶಯಗಳು ಎಂದು ಬರೆದುಕೊಂಡು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಸುಮಾರು 7 ಫೋಟೊಗಳಿದ್ದು ಒಂದಕ್ಕಿಂತ ಒಂದು ಮುದ್ದಾಗಿದೆ.

ಇತ್ತೀಚಿನ ದಿನಗಳಲ್ಲಿ ಆಗಾಗ ಟ್ರಿಪ್ ಹೋಗುವ ಮೋಕ್ಷಿತಾ ಪ್ರವಾಸದ ಫೋಟೊಗಳನ್ನು ಹಂಚಿಕೊಳ್...