ಭಾರತ, ಮೇ 7 -- ಆಪರೇಷನ್ ಸಿಂಧೂರ: ಜಮ್ಮು - ಕಾಶ್ಮೀರದ ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ರಾತ್ರೋ ರಾತ್ರಿ ಆಪರೇಷನ್ ಸಿಂಧೂರ ಕಾರ್‍ಯಾಚರಣೆಯನ್ನು ಶುರುಮಾಡಿದೆ. ಪಾಕಿಸ್ತಾನ ಹಾಗೂ ಪಿಒಕೆ (ಪಾಕ್‌ ಆಕ್ರಮಿತ ಕಾಶ್ಮೀರ)ದಲ್ಲಿರುವ 9 ಉಗ್ರ ತಾಣಗಳ ಮೇಲೆ ದಾಳಿ ನಡೆಸಿದೆ. ಇದುವರೆಗಿನ ಲಭ್ಯ ಮಾಹಿತಿ ಪ್ರಕಾರ, ಭಾರತೀಯ ಸೇನೆ ಬುಧವಾರ (ಮೇ 7) ನಸುಕಿನ ವೇಳೆ ಪಾಕಿಸ್ತಾನ ಹಾಗೂ ಪಿಒಕೆ (ಪಾಕ್‌ ಆಕ್ರಮಿತ ಕಾಶ್ಮೀರ)ದಲ್ಲಿರುವ 9 ಉಗ್ರ ತಾಣಗಳ ಮೇಲೆ ದಾಳಿ ಶುರುಮಾಡಿರುವುದಾಗಿ ರಕ್ಷಣಾ ಸಚಿವಾಲಯ ಘೋಷಿಸಿದೆ.

ಭಾರತದ ರಕ್ಷಣಾ ಸಚಿವಾಲಯವು ಆಪರೇಷನ್ ಸಿಂಧೂರಕ್ಕೆ ಸಂಬಂಧಿಸಿ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಆರು ಮುಖ್ಯ ಅಂಶಗಳನ್ನು ಪ್ರಸ್ತಾಪಿಸಿದೆ. ವಿವರ ಹೀಗಿದೆ

1) ಬುಧವಾರ ನಸುಕಿನ ವೇಳೆ ದಾಳಿ ಶುರು: ಭಾರತದ ಸಶಸ್ತ್ರ ಪಡೆಗಳು ಬುಧವಾರ ನಸುಕಿನ 1.44ರ ವೇಳೆಗೆ ಪಾಕಿಸ್ತಾನ ಹಾಗೂ ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ)ದಲ್ಲಿರುವ ಉಗ್ರ ನೆಲೆ, ಉಗ್ರ ತಾಣಗಳನ್ನು ಗುರಿಯಾಗಿಟ್ಟುಕೊಂಡು ನಿಶ್ಚಿತ ದಾಳಿ ಶುರುಮಾ...