ಭಾರತ, ಏಪ್ರಿಲ್ 28 -- ಪೋಷಕಾಂಶಗಳ ನಿಧಿ: ಮೊಸರು ವಿವಿಧ ಪೋಷಕಾಂಶಗಳ ನಿಧಿಯಾಗಿದೆ. ಇದರಲ್ಲಿ ಜೀವಸತ್ವ, ಖನಿಜಗಳು, ಕ್ಯಾಲ್ಸಿಯಂ, ಪ್ರೋಟೀನ್‌ನಂತಹ ಅನೇಕ ಪ್ರಯೋಜನಕಾರಿ ಅಂಶಗಳಿವೆ. ಅಲ್ಲದೆ, ಇದು ಪ್ರೋಬಯಾಟಿಕ್ ಆಗಿದೆ, ಅಂದರೆ ಇದು ನಮ್ಮ ಆರೋಗ್ಯಕ್ಕೆ ಬೇಕಾದ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ. ಇಷ್ಟೆಲ್ಲಾ ಪ್ರಯೋಜನಗಳಿದ್ದರೂ, ಆಯುರ್ವೇದವು ಪ್ರತಿದಿನ ಮೊಸರು ತಿನ್ನುದಿರಲು ಸಲಹೆ ನೀಡುತ್ತದೆ.

ಊಟದ ನಂತರ ಮೊಸರು ತಿನ್ನಬೇಡಿ: ಆಯುರ್ವೇದ ಪ್ರಕಾರ, ಮೊಸರನ್ನು ಆಹಾರದ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದರೂ, ಅದನ್ನು ಸರಿಯಾದ ಕ್ರಮದಲ್ಲಿ ತಿನ್ನಬೇಕು. ಇಲ್ಲವಾದಲ್ಲಿ ಅಡ್ಡಪರಿಣಾಮಗಳು ಉಂಟಾಗಬಹುದು. ಆಯುರ್ವೇದ ಪ್ರಕಾರ, ಊಟದ ನಂತರ ಮೊಸರು ತಿನ್ನುವುದನ್ನು ಸರಿಯಲ್ಲ. ಊಟಕ್ಕೆ ಎರಡು ಗಂಟೆಗಳ ಮೊದಲು ಇದನ್ನು ಸೇವಿಸುವುದು ಸೂಕ್ತ.

ಮೊಸರನ್ನು ಬಿಸಿ ಮಾಡಬೇಡಿ: ಮೊಸರನ್ನು ಬಿಸಿ ಮಾಡಿ ತಿನ್ನಬೇಡಿ. ಮೊಸರಿನಿಂದ ತಯಾರಿಸಿದ ವಸ್ತುಗಳನ್ನು ಬಿಸಿ ಮಾಡುವುದರಿಂದ ದೇಹದಲ್ಲಿ ಉ...