ಭಾರತ, ಫೆಬ್ರವರಿ 5 -- ಹಾವೇರಿ: ಅತ್ತೆ, ಸೊಸೆ ಇಬ್ಬರು ಸೇರಿ ಗೃಹ ಲಕ್ಷ್ಮಿ ಯೋಜನೆಯ ಹಣದಿಂದ ಬೋರ್ ವೆಲ್ ಕೊರಿಸಿಕೊಂಡರು, ಗೃಹಲಕ್ಷ್ಮಿ ಹಣದಿಂದ ಮಕ್ಕಳ ಶಾಲಾ-ಕಾಲೇಜು ಶುಲ್ಕ ಕಟ್ಟಲುು ಸಾಧ್ಯವಾಯ್ತು, ಗೃಹಲಕ್ಷ್ಮಿ ಹಣದಿಂದ ಟಿವಿ ಖರೀದಿಸಿದರು, ಗೃಹ ಲಕ್ಷ್ಮಿ ಹಣದಿಂದ ಫ್ರೀಡ್ಜ್ ತಗೊಂಡ್ರು, ಗೃಹಲಕ್ಷ್ಮಿ ಹಣದಿಂದ ವಾಷಿಂಗ್ ಮೆಷಿನ್ ಖರೀದಿಸಿದರು ಹೀಗೆ ಹಲವು ರೀತಿಯಲ್ಲಿ ಮಹಿಳೆಯರು ಕರ್ನಾಟಕ ಸರ್ಕಾರ ಮಹತ್ವಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆ ಹಣವನ್ನು ಹಲವು ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡಿದ್ದಾರೆ. ಆದರೆ ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಆಶಾ ಕಾರ್ಯಕರ್ತೆಯೊಬ್ಬರು ಗೃಹಲಕ್ಷ್ಮಿ ಹಣವನ್ನು ಸರ್ಕಾರಿ ಶಾಲೆಗೆ ದೇಣಿಗೆ ನೀಡಿದ್ದಾರೆ. ಇವರು ನೀಡಿರುವ ಹಣದಿಂದ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಖರೀದಿಸಲಾಗಿದೆ. ಆಶಾ ಕಾರ್ಯಕರ್ತೆಯ ಈ ಕಾರ್ಯಕ್ಕೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಗೃಹಲಕ್ಷ್ಮಿ ಹಣವನ್ನು ಶಾಲೆಗೆ ನೀಡಿದ ಆಶಾ ಕಾರ್ಯಕರ್ತೆ ಐರಣಿ ...