ಭಾರತ, ಏಪ್ರಿಲ್ 16 -- ಅಮೃತಧಾರೆ ನಟಿ ಛಾಯಾ ಸಿಂಗ್‌ ಹೊಸ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಗುಲಾಬಿ ಬಣ್ದದ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ. ಇವರ ಫೋಟೋಗಳಿಗ ಅಭಿಮಾನಿಗಳು ವೈವಿಧ್ಯಮಯವಾಗಿ ಕಾಮೆಂಟ್‌ ಮಾಡಿದ್ದಾರೆ. ಇದೇ ಸಮಯದಲ್ಲಿ ರೀಲ್ಸ್‌ ಹಂಚಿಕೊಂಡಿದ್ದಾರೆ. ರಾಜ್‌ ಕುಮಾರ್‌ ಹಾಡಿರುವ ಓಂ ಸಿನಿಮಾದ ಸಿನಿಮಾದ ಓ ಗುಲಾಬಿಯೇ ಹಾಡಿಗೆ ಇವರು ರೀಲ್ಸ್‌ ಮಾಡಿದ್ದಾರೆ. ಅಪ್ಪಾಜಿಯ ಧ್ವನಿಯನ್ನ ಪ್ರೀತಿಸಿ ಈ ರೀಲ್ಸ್‌ ಮಾಡಿದ್ದೇನೆ ಎಂದು ಡಾ. ರಾಜ್‌ ಕುಮಾರ್‌ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಓ ಗುಲಾಬಿಯೇ ಹಾಡಿಗೆ ಗುಲಾಬಿ ಬಣ್ಣದ ಸೀರೆಯುಟ್ಟ ನಟಿ ಛಾಯಾ ಸಿಂಗ್‌ ಹೆಜ್ಜೆ ರೀಲ್ಸ್‌ ಮಾಡಿದ್ದಾರೆ. "ಮೇಡಂ ನೀವೇ ಗುಲಾಬಿ ಹೂವು" "ನೀವು ಪಿಂಕ್‌ ಬಣ್ಣದ ಕ್ಯೂಟ್‌ ಗುಲಾಬಿ" "ನೀವು ಸುಂದರವಾದ ಗುಲಾಬಿ" "ಗುಲಾಬಿಯೇ ನಾಚುವ ಅಂದ ನಿಮ್ಮದು", "ಈ ಗುಲಾಬಿ ನೋಡೋಕೆ ಎರಡು ಕಣ್ಣು ಸಾಲದು, ಓ ಗುಲಾಬಿ ಸುಂದರ ಗುಲಾಬಿ , ಈ ಗುಲಾಬಿ ನೋಡಿ ಆದ್ರೆ ದೃಷ್ಟಿ ಹಾಕಬೇಡಿ" ಎಂದು ಫ್ಯಾನ್ಸ್‌ ಕಾಮೆಂಟ್...