Bengaluru, ಮೇ 24 -- ಮೈಸೂರು : ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ‌ ರಾಜ್ಯ ಸರ್ಕಾರಕ್ಕೆ ಹೆಸರು ಬದಲಿಸುವ ಅಧಿಕಾರವಿದೆ, ಆ ಕಾರಣಕ್ಕೆ ನಾವು ಬದಲಾಯಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಳೆಯ ನಡುವೆಯೂ ಕೆ ಆರ್ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ರಾಮನಗರ‌ ಜಿಲ್ಲೆ ಮಾಡಿದಾಗ ಯಾವ ಇತಿಹಾಸ ಇತ್ತು..? ಎಲ್ಲವನ್ನೂ ಜನಾಭಿಪ್ರಾಯದ‌ ಮೇಲೆ‌ ಮಾಡಲಾಗಿದೆ. ಜನರು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮಾಡಿ ಅಂದಿದ್ದಾರೆ ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿಗೆ ಟಕ್ಕರ್ ಕೊಟ್ಟಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಅವರ ಪ್ರಕರಣದಲ್ಲಿ ಇಡಿ ಅವರು ತನಿಖೆ ಮಾಡಲಿ, ಕಪ್ಪು ಹಣ ಇದ್ದರೆ ಪತ್ತೆ ಹಚ್ಚಿ. ಆದರೆ ನೀವು ರಾಜಕೀಯ ದುರುದ್ದೇಶದಿಂದ ಮಾಡಬಾರದು. ಸಂಸ್ಥೆಗಳು ಇರುವುದು ಕಪ್ಪುಹಣ ತಡೆಗಟ್ಟಲು ಇವೆ. ಪರಮೇಶ್ವರ್ ಕೇಸ್‌ನಲ್ಲಿ‌ ರಾಜಕೀಯ ಪ್ರೇರಿತ ದಾಳಿ ಅನಿಸಿದೆ. ಸುಪ್ರೀಂಕೋರ್ಟ್ ಕೂಡ ಗಮನ ಹರಿಸಿ...