Bengaluru, ಮೇ 6 -- ಬೆಂಗಳೂರು: ಹೃದಯ ವೈಫಲ್ಯಕ್ಕೆ ಒಳಗಾಗಿದ್ದ ಇಬ್ಬರು ರೋಗಿಗಳಿಗೆ ಸ್ಪರ್ಶ್ ಆಸ್ಪತ್ರೆಯಲ್ಲಿ ಕೃತಕ ಹೃದಯ ಕಸಿ ನೆರವೇರಿಸಿದ್ದು, ಇದು ರಾಜ್ಯದಲ್ಲೇ ಮೊದಲ ಯಶಸ್ವಿ ಪ್ರಯತ್ನವಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಆರ್ ನಗರ ಸ್ಪರ್ಶ್ ಆಸ್ಪತ್ರೆಯ ಹಿರಿಯ ಹೃದಯ ಶಸ್ತ್ರಚಿಕಿತ್ಸಕ ಡಾ. ಅಶ್ವಿನ್, ಹೃದಯದ ಎಡ ಹೃತ್ಕರ್ಣದ ಹಾರ್ಟ್‌ಮೇಟ್ 3 ಉಪಕರಣ-(ಮೂರನೇ ತಲೆಮಾರಿನ)ವನ್ನು ಮೆಗ್ಲೆವ್ ಫ್ಲೋ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಉತ್ತರ ಕರ್ನಾಟಕ ಮೂಲದ ಗುರಪ್ಪ ಗೋಣಿ ಹಾಗೂ ಗುರುಲಿಂಗಪ್ಪ ಕಲ್ಯಾಣಶೆಟ್ಟಿ ಎಂಬ ಇಬ್ಬರು ಹಿರಿಯ ರೋಗಿಗಳಿಗೆ ಕೃತಕ ಹೃದಯ ಕಸಿ ನೆರವೇರಿಸಲಾಗಿದೆ. ಇದು ಅತ್ಯಂತ ಸಂಕೀರ್ಣ ಹಾಗೂ ಅಪರೂಪದ ಹೃದಯ ಕಸಿ ಶಸ್ತ್ರಚಿಕಿತ್ಸೆಯಾಗಿದೆ ಎಂದರು.
ಈ ಇಬ್ಬರು ರೋಗಿಗಳು ತೀರ ಗಂಭೀರಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಬಿಪಿ ನಿಯಂತ್ರಿಸಲು ಬಲೂನ್ ಪಂಪ್ ಅಳವಡಿಸಿದರೂ, ಸುಧಾರಣೆ ಕಾಣಲಿಲ್ಲ, ಕ್ರಮೇಣ ಬಹುಅಂಗಾಂಗ ವೈಫಲ್ಯ ಸಾಧ್ಯತೆ ಕಂಡುಬಂತು. ಅವರಿಬ್ಬರಿಗೂ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.