Bengaluru, ಮೇ 24 -- ಬೆಂಗಳೂರು: ರಾಜ್ಯದ ಪೊಲೀಸ್‌ ಮಹಾನಿರೀಕ್ಷಕರು ಮತ್ತು ಪೊಲೀಸ್ ಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಡಾ. ಎಂ. ಎ. ಸಲೀಂ ಅವರು ಇಲಾಖೆ ಮತ್ತು ಸಿಬ್ಬಂದಿಗಳನ್ನು ಉದ್ದೇಶಿಸಿ ಪತ್ರ ಬರೆದಿದ್ದು, ನಾಡಿನಲ್ಲಿ ಶಾಂತಿ-ಸೌಹಾರ್ದಯುತ, ಸುರಕ್ಷತೆಯ ವಾತಾವರಣ ನಿರ್ಮಿಸುವ ಹಾಗೂ ಇಲಾಖೆಯನ್ನು ಸಮಾಜಸ್ನೇಹಿಯಾಗಿ ಬದಲಿಸಿ, ಇಲಾಖೆಯನ್ನು ಆಧುನೀಕರಣದೆಡೆಗೆ ಕೊಂಡೊಯ್ಯಲು ನಮ್ಮೆಲ್ಲ ಸಾಮರ್ಥ್ಯ ಮೀರಿ ದುಡಿಯುವ ಧೈಯದೆಡೆಗೆ ನಾವೆಲ್ಲರೂ ಒಮ್ಮತವಾಗಿ ಕಾರ್ಯಪ್ರವೃತ್ತರಾಗೋಣ ಎಂದು ತಿಳಿಸಿದ್ದಾರೆ.

ಎರಡು ಪುಟಗಳ ಪತ್ರದಲ್ಲಿ ಅವರು, ರಾಜ್ಯದ ಕಾನೂನು ಸುವ್ಯವಸ್ಥೆ, ಸೌಹಾರ್ದತೆಗಳನ್ನು ಕಾಪಾಡುವ ಸಲುವಾಗಿ ಕಿರಿಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಹಿಡಿದು ಹಿರಿಯ ಪೊಲೀಸ್ ಅಧಿಕಾರಿಗಳವರೆಗಿನ ಎಲ್ಲಾ ಸಹೋದ್ಯೋಗಿಗಳಿಂದ ಸಹಕಾರ ಮತ್ತು ಬೆಂಬಲ ಕೋರಿದ್ದಾರೆ. ಜತೆಗೆ ರಾಜ್ಯದಲ್ಲಿ ಅಪರಾಧಗಳನ್ನು ವ್ಯವಸ್ಥಿತವಾಗಿ ತಡೆಯುವ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಅಪರಾಧ ಪ್ರಕರಣಗಳ ಸಮರ್ಥ ಹಾಗೂ ನಿಖರ ತನಿಖೆಯನ್ನು...