ಭಾರತ, ಮಾರ್ಚ್ 24 -- ಮಂಗಳೂರು: ಚಿಕ್ಕಮಂಗಳೂರಿನ ಖಾಸಗಿ ರೆಸಾರ್ಟ್‌ನ ಈಜುಕೊಳದಲ್ಲಿ ಬಿದ್ದು ಪ್ರವಾಸಿಯೊಬ್ಬರು ಸಾವನ್ನಪ್ಪಿದ್ದಾರೆ. ಮಡಿಕೇರಿ ಕುಶಾಲನಗರದ ಮೂಲದ ಪ್ರವಾಸಿ ಮರಣ ಹೊಂದಿದ್ದಾರೆ. ಈಜಾಡಲೆಂದು ಈಜುಕೊಳಕ್ಕೆ ಹಾರಿದ ಸಂದರ್ಭ ತಲೆ ಟ್ವಿಸ್‌ ಆಗಿ ಈಜುಕೊಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ದೃಶ್ಯ ರೆಸಾರ್ಟ್‌ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ‌

ಕುಶಾಲನಗರದ ಮೊಬೈಲ್ ಶಾಪ್‌ನ ಮಾಲೀಕ ನಿಶಾಂತ್ ಸಾವನ್ನಪ್ಪಿದವರು. ನಿಶಾಂತ್ ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ಸ್ನೇಹಿತರ ಜೊತೆ ತೆರಳಿದ್ದರು. ನಿಶಾಂತ್ ತಾವು ತಂಗಿದ್ದ ರೆಸಾರ್ಟ್‌ನ ಈಜುಕೊಳದಲ್ಲಿ ಈಜಲು ಇಳಿದಿದ್ದರು.

ನೀರಿಗೆ ಹಾರಿದ ವೇಳೆ ಕೈ ಕಾಲು ಆಡಿಸದ ಹಿನ್ನೆಲೆ ಸ್ನೇಹಿತರು ಅವರನ್ನು ಈಜುಕೊಳದಿಂದ ಹೊರ ತರುವ ಪ್ರಯತ್ನ ಮಾಡಿದ್ದಾರೆ. ಆದರೆ ಮೇಲೆತ್ತುವ ಮೊದಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಈ ಹಿಂದೆ ಮಂಗಳೂರಿನ ಈಜು ಕೊಳದಲ್ಲಿ ಮೂವರು ಯುವತಿಯರ ದುರಂತ ಸಾವಿನ ಘಟನೆಯನ್ನು ಈ ಘಟನೆ ನೆನಪಿಸುತ್ತದೆ.

ಇದನ್ನೂ ಓದಿ: ನಿಸರ್ಗದ ...