ಭಾರತ, ಮಾರ್ಚ್ 26 -- ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಪ್ರತಿಯೊಂದು ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಬದುಕಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಇದೀಗ ಜನನ ಹಾಗೂ ಮರಣ ಪ್ರಮಾಣ ಪತ್ರದ ಶುಲ್ಕವೂ ಹೆಚ್ಚಳವಾಗಿದೆ. ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಹಿಂದಿಗಿಂತ ದುಪ್ಪಟ್ಟು ಶುಲ್ಕ ಪಾವತಿಸಬೇಕಾಗಿದೆ.

ಹಿಂದೆ ಜನನ ಪಡೆಯಲು 5ರೂ ಹಾಗೂ ಮರಣ ಪ್ರಮಾಣಪತ್ರ ಪಡೆಯಲು 10 ರೂ ನೀಡಬೇಕಿತ್ತು, ಆದರೆ ಈ ಎರಡರ ಶುಲ್ಕವೂ 50 ರೂಪಾಯಿಗೆ ಏರಿಕೆಯಾಗಿದ್ದು, ಇದರಿಂದ ಜನರು ಆಕ್ರೋಶಗೊಂಡಿದ್ದಾರೆ. ನಮ್ಮ ಜನನ ಪ್ರಮಾಣಪತ್ರ ಪಡೆಯಲು ನಾವೇ ದುಡ್ಡು ಕೊಡಬೇಕಾಗಿದೆ ಎಂದು ಜನರು ಸರ್ಕಾರವನ್ನು ದೂಷಿಸುತ್ತಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್ ಸರ್ಕಾರವನ್ನು ಟೀಕೆ ಮಾಡಿರುವ ಬಿಜೆಪಿ ಲೂಟಿ ಸರ್ಕಾರ ಎಂದು ಕರೆದಿದೆ.

ಜನನ-ಮರಣ ಪ್ರಮಾಣಪತ್ರದ ದರ ಏರಿಕೆ ಸಂಬಂಧಿಸಿದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಿಜೆಪಿ ಜನನವಾಗಲಿ- ಮರಣವಾಗಲಿ, ಜನರನ್ನು ಲೂಟಿ ಹೊಡೆಯುವುದೇ ಕಾಂಗ್ರೆಸ್‌ ಸರ್ಕಾರದ ಕಾಯ...