Bangalore, ಜನವರಿ 31 -- ಕಾಕಾ ಪಾಟೀಲ್‌ಗೂ ಫ್ರೀ, ಮಹದೇವಪ್ಪಂಗೂ ಫ್ರೀ ಕೊಡುವ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದ್ದವರನ್ನು ಬಡವರ ವಿರೋಧಿ ಎಂದು ಟೀಕಿಸಿ ಇಂತಹದೊಂದು ಉತ್ತರ ನೀಡಲಾಗಿತ್ತು. ʼಮೂರು ಲಕ್ಸ ಕೋಟಿಯ ಬಜೆಟ್‌ ಇರುವ ಸರ್ಕಾರ. ಇಷ್ಟು ದೊಡ್ಡ ಬಜೆಟ್‌ನಲ್ಲಿ 50-60 ಸಾವಿರ ಕೋಟಿ ರೂಹೊಂದಿಸೋಕೆ ಆಗಲ್ವಾ? ಬಿಜೆಪಿ ಸರ್ಕಾರದ 40% ಕಮಿಷನ್‌ ದಂಧೆಯೊಂದನ್ನು ನಿಲ್ಲಿಸಿದರೆ ಗ್ಯಾರಂಟಿಗೆ ಬೇಕಾದ ಹಣ ಬರುತ್ತದೆʼ ಎಂದು ಉದ್ದುದ್ದ ಭಾಷಣ ಮಾಡಿದ್ದರು. ಆದರೆ ಅದೇ ರಾಜಕಾರಣಿಗಳಿಂದ ನೀರಿನ ಹೆಸರಲ್ಲಿ ಪೈಸೆ, ಪೈಸೆ ಭಿಕ್ಷೆ ಬೇಡುತ್ತಿದ್ದಾರೆ. ಲೀಟರ್‌ಗೆ ಒಂದು ಪೈಸೆ ಹೆಚ್ಚು ಮಾಡಿದರೆ ಏನಾಗ್ಬಿಡತ್ತೆ ಎಂದು ಲಕ್ಷ ಕೋಟಿಯ ಅಸಲಿ ಕಥೆ ಬಿಚ್ಚಿಡುತ್ತಿದ್ದಾರೆ.

ಬಸ್‌, ಹಾಲು, ಪೆಟ್ರೋಲ್‌, ಮುದ್ರಾಂಕ ಶುಲ್ಕ, ಸೆಸ್‌ ಸೇರಿ ಇನ್ನಷ್ಟು ವಿಷಯಗಳಲ್ಲಿ ದರ ಏರಿಕೆ ಮಾಡಿದಾಗ ಕಾಲಕ್ಕೆ ತಕ್ಕಂತೆ ನಡೆಯುವ ಹೆಚ್ಚಳವಿದು ಎಂದು ಚೆಂದದ ಕಥೆ ಕಟ್ಟಿದರು. ಮಗುಚಿ ಬಿದ್ದರೂ ಮೀಸೆ ಮಣ...