Bangalore, ಏಪ್ರಿಲ್ 3 -- ದೇಶ ಹಾಗೂ ರಾಜ್ಯದ ಜನತೆಯನ್ನು ಲೂಟಿಕೋರರು ಆಳುತ್ತಿದ್ದಾರೆ ಎಂದು ಆಗಾಗ ನಾವು ಕೋಪದಲ್ಲಿ ಹೇಳುವುದಿದೆ. ನಮ್ಮನ್ನು ಆಳುವ ಮಹಾ ನಾಯಕರನ್ನು ಇಂತಹ ಕೆಟ್ಟ ಶಬ್ದಗಳಿಂದ ದಯವಿಟ್ಟು ಸಂಬೋಧಿಸಬೇಡಿ. ಅವರು ಖಂಡಿತ ಲೂಟಿಕೋರರಲ್ಲ. ಹಾಗಿದ್ದರೆ.....

ಇಂದು ಬೆಳಗ್ಗೆ ಸುದ್ದಿಗಳನ್ನು ಓದುತ್ತಿದ್ದಾಗ ಏಪ್ರಿಲ್‌ ಫೂಲ್‌ ಮಾಡುತ್ತಿರಬಹುದು ಎನ್ನುವಷ್ಟರ ಮಟ್ಟಿಗೆ ಬೆಲೆ ಏರಿಕೆಯ ಪಟ್ಟಿಗಳು ಕಾಣಿಸಿದವು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಬೆವರು ಹಾಗೂ ರಕ್ತ ಹೀರಲೇ ಇವೆ ಎನ್ನುವಂತೆ ಅನಿಸತೊಡಗಿತು. ಹಾಲು, ಕಸ, ವಿದ್ಯುತ್‌, ಎಟಿಎಂ, ಟೋಲ್‌ಗಳ ಬೆಲೆ ಏರಿಕೆಯ ಜತೆಗೆ ಒಂದಿಷ್ಟು ತೆರಿಗೆ ಕೂಡ ಹೆಚ್ಚಾಗಿತ್ತು. ಇದನ್ನೆಲ್ಲ ಓದಿಕೊಂಡು ಸಾವರಿಸಿಕೊಳ್ಳುವಷ್ಟರಲ್ಲಿ ನಮ್ಮ ಮನೆಯಲ್ಲಿ ವಾಹನ ಪಾರ್ಕ್‌ ಮಾಡುವ ಶುಲ್ಕವನ್ನೂ ಏರಿಸುತ್ತಿದ್ದಾರೆ ಎನ್ನುವ ಸುದ್ದಿ ಓದಿದಾಗ ಕೋಪ ನೆತ್ತಿಗೇರಿತು. ಅದರ ಬೆನ್ನಲ್ಲೇ ಡೀಸೆಲ್‌ ದರವನ್ನು ಮತ್ತೆ ಎರಡು ರೂಪಾಯಿ ಏರಿಸುತ್ತಿದ್ದಾರೆ ಎನ್ನುವುದನ್ನು ಓದಿದಾಗ, ಖಂಡಿತ ಇವರನ್ನ...