Bangalore, ಮಾರ್ಚ್ 27 -- ರಾಜ್ಯದೆಲ್ಲೆಡೆ ಬಿಸಿಬಿಸಿಯಾಗಿ ಹನಿಟ್ರ್ಯಾಪ್‌ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಆದರೆ ರಾಜ್ಯ ಸರ್ಕಾರವೇ ಎಲ್ಲ ಕನ್ನಡಿಗರನ್ನು ಹನಿಟ್ರ್ಯಾಪ್‌ ಮಾಡುತ್ತಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯ ಪ್ರಭಾವಿ ನಾಯಕರು ತಮ್ಮ ವಿರೋಧಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರೆ, ರಾಜ್ಯ ಸರ್ಕಾರ ಮಾತ್ರ ಯಾವುದೇ ಭೇದಭಾವವಿಲ್ಲದೇ ಸಮಗ್ರ ಕನ್ನಡಿಗರಿಗೆ ಹನಿಟ್ರ್ಯಾಪ್‌ ಮಾಡುತ್ತಿದೆ. ಈ ಹನಿಟ್ರ್ಯಾಪ್‌ನ ಹೊಸ ಸೇರ್ಪಡೆ ನಂದಿನಿ ಹಾಲಿ ದರ.

ಹೌದು. ರಾಜ್ಯದ ಮತದಾರರಿಗೆ ಗ್ಯಾರಂಟಿ ಎನ್ನುವ ʼಹನಿʼಯನ್ನು ತೋರಿಸಿ ದುಬಾರಿ ʼಟ್ರ್ಯಾಪ್‌ʼ ಮಾಡಲಾಗುತ್ತಿದೆ. ಬೆಲೆ ಏರಿಕೆಗೆ ಪರಿಹಾರ ಕ್ರಮವಾಗಿ ಗ್ಯಾರಂಟಿ ತಂದಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೆಸ್‌ ಸರ್ಕಾರವೀಗ, ಜನರನ್ನು ಅದೇ ಬೆಲೆ ಏರಿಕೆ ಕೂಪಕ್ಕೆ ತಳ್ಳುತ್ತಿದೆ. ಹಾಡುಹಗಲೇ, ನಡು ಬೀದಿಯಲ್ಲಿ ʼಹನಿಟ್ರ್ಯಾಪ್‌ʼ ಮಾಡುವುದು ಹೇಗೆ ಎನ್ನುವುದನ್ನು ದೇಶದ ಜನತೆಗೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಗ್ಯಾಂಗ್‌ ತೋರಿಸಿಕೊಟ್ಟಿದೆ. ಅಂದ್ಹಾಗ...