ಭಾರತ, ಏಪ್ರಿಲ್ 5 -- ವಕ್ಫ್ ತಿದ್ದುಪಡಿ ಮಸೂದೆ ಶುಕ್ರವಾರ (ಏಪ್ರಿಲ್ 4) ಮುಂಜಾನೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಈ ಹಿಂದೆ ಕರ್ನಾಟಕದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪಾಡಿ ಅವರು ವಕ್ಫ್‌ ಆಸ್ತಿ ರಕ್ಷಣೆಗೆ ಸಂಬಂಧಿಸಿ ಹೋರಾಟ ನಡೆಸಿ ವಿಸ್ತೃತ ವರದಿ ನೀಡಿದ್ದರು. ಆದರೆ, ಅವರು ನೀಡಿದ ವರದಿಗೆ ಶಾಸನಸಭೆಯ ಸಮ್ಮತಿ ದೊರಕಿರಲಿಲ್ಲ. ಸಮ್ಮತಿ ಕೊಡಿಸುವ ಸಲುವಾಗಿ ಎಲ್ಲಿಲ್ಲದ ಹೋರಾಟ ನಡೆಸಿದ ಅನ್ವರ್‌ ಮಾನಿಪ್ಪಾಡಿಯವರ ಕುರಿತು ರಾಜೀವ್ ಹೆಗಡೆ ಬರೆದ ವಿಸ್ತಾರ ಮಾಹಿತಿ ಇಲ್ಲಿದೆ.

ಕರ್ನಾಟಕ ಬಿಜೆಪಿಯಂಥ ಇನ್ನೊಂದು ನಾಲಾಯಕ್‌ ಪಕ್ಷ ಬೇರೆ ಸಿಗಲಾರದು. ಕಾಂಗ್ರೆಸ್‌ ನಾಯಕರು ತಮ್ಮ ಸೈದ್ಧಾಂತಿಕ ಹೋರಾಟ ಹಾಗೂ ಅದರ ಜತೆಗಿರುವವರನ್ನು ಕೊನೆಯವರೆಗೂ ಕೈ ಹಿಡಿಯುತ್ತಾರೆ. ಆದರೆ ಕರ್ನಾಟಕ ಬಿಜೆಪಿಯಂಥ ಅನುಕೂಲ ಸಿಂಧು ಹಾಗೂ ಟಿಶ್ಯೂ ಪೇಪರ್‌ ರಾಜಕೀಯ ಮಾಡುವವರು ಬೇರೆಲ್ಲಿಯೂ ಸಿಗಲಾರರು.

ಈಗ ರಾಷ್ಟ್ರಮಟ್ಟದಲ್ಲಿ ವಕ್ಫ್‌ ಆಸ್ತಿ ಕುರಿತು ದೊಡ್ಡ ಚರ್ಚೆ ಆಗುತ್ತಿದ್ದಂತೆ ಎಲ್ಲರಿಗೂ ಅನ್ವರ್‌ ಮಾಣಿಪ್ಪಾಡಿ ನೆನಪಾಗು...