Bangalore, ಮಾರ್ಚ್ 29 -- ಮಕ್ಕಳ ಬಳಿ ಶೌಚಾಲಯ ಕ್ಲೀನ್‌ ಮಾಡಿಸಿರುವುದು ಗೊತ್ತಾದ ಮರುಕ್ಷಣವೇ ಅಂತಹ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕರ್ನಾಟಕದ ಘನತೆವೆತ್ತ ಶಿಕ್ಷಣ ಸಚಿವರು ಮತ್ತೊಮ್ಮೆ ಗುಡುಗಿದ್ದಾರೆ. ಖಾಲಿ ಡಬ್ಬಗಳು ಹೆಚ್ಚು ಸೌಂಡ್‌ ಮಾಡುವ ರೀತಿ, ಈ ಶಿಕ್ಷಣ ಸಚಿವರು ಮಾತನಾಡಿದಾಗಲೆಲ್ಲ ಅನುಭವವಾಗುತ್ತದೆ. ನಮ್ಮ ರಾಜ್ಯ ನೋಡಿದ ಅತ್ಯಂತ ಕೆಟ್ಟ ಶಿಕ್ಷಣ ಸಚಿವರು ಎನ್ನುವ ಆರೋಪಗಳ ಹೊರತಾಗಿಯೂ, ಸತ್ಯಾಸತ್ಯತೆಯೊಂದಿಗೆ ನಾನು ಈ ಮಾತನ್ನು ಹೇಳುತ್ತಿದ್ದೇನೆ.

ಶಿಕ್ಷಣ ಸಚಿವರು ತಮ್ಮ ಎಂದಿನ ಶೈಲಿಯಲ್ಲಿ ನೀಡಿದ ಹೇಳಿಕೆಯನ್ನು ನೋಡಿ ವಾಸ್ತವವನ್ನು ಅರಿಯಲು ಮುಂದಾದೆ. ʼವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸುವ ಅನಾಗರಿಕ ಶಿಕ್ಷಕರುʼ ಎಂದು ಸುದ್ದಿ ಮಾಡಿ, ಈ ಶಿಕ್ಷಣ ಸಚಿವರನ್ನು ಪ್ರಶ್ನಿಸುವ ಮೊದಲು ದಯವಿಟ್ಟು ನಮ್ಮ ಮಾಧ್ಯಮಗಳು ಕೂಡ ವಾಸ್ತವವನ್ನು ಜನರ ಮುಂದಿಡುವ ಪ್ರಯತ್ನ ಮಾಡಬೇಕು.

ಸಣ್ಣ ಸರ್ಕಾರಿ ಶಾಲೆಗಳಲ್ಲಿ ಒಂದು ಯುನಿಟ್‌ ಶೌಚಾಲಯವಿದ್ದರೆ, ಕೆಲವು ಶಾಲೆಗಳಲ್ಲು ಎರಡು ಅಥವಾ ಮ...