ಭಾರತ, ಮಾರ್ಚ್ 12 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 11ರ ಸಂಚಿಕೆಯಲ್ಲಿ ಮಾಧ್ಯಮದಲ್ಲಿ ವೀರು ಬಗ್ಗೆ ಸುದ್ದಿ ಹರಡುತ್ತಿರುವುದು ಕೇಳಿ ಖುಷಿ ಪಡುತ್ತಿದ್ದಾರೆ ವಿಜಯಾಂಬಿಕಾ ಮದನ್‌. ಸಿರೆಗೆರೆ ಕಾಲ್ ಮಾಡಿ ಮದನ್‌ ಮಾಡಿರುವ ಕೆಲಸ ಶಹಭಾಸ್ ಹೇಳ್ತಾರೆ. ಈ ಘಟನೆಯಿಂದಾಗಿ ವೀರು ರಾಜೀನಾಮೆ ಕೊಡುವುದು ಪಕ್ಕಾ, ಇದರಿಂದ ತಾನೇ ಮುಂದಿನ ಸಿಎಂ ಎಂದು ಬೀಗುತ್ತಿದ್ದಾನೆ ಸಿರಿಗೆರೆ ಶ್ರೀನಿವಾಸ. ಇತ್ತ ವಿಜಯಾಂಬಿಕಾ ಸಿರಿಗೆರೆ ಸಿಎಂ ಆದ್ರೆ ತಾನು ರಾಜ್ಯ ಸಚಿವೆ ಆಗ್ತೀನಿ ಎಂದು ಆಸೆ ಪಡುತ್ತಿದ್ದರೆ, ತಾನು ಮಿನಿಸ್ಟರ್ ಮಗ ಆಗ್ತೀನಿ ಅಂತ ಕನಸು ಕಾಣ್ತಿದ್ದಾನೆ ಮದನ್‌. ಈ ಹೊತ್ತಿಗೆ ಸಿರಿಗೆರೆ ಮೇಲೆ ಮದನ್‌ಗೆ ಕೊಂಚ ಅನುಮಾನ ಮೂಡುತ್ತದೆ. ಎಲ್ಲಾದ್ರೂ ಅವರೇ ನಮಗೆ ಮೋಸ ಮಾಡಿದ್ರೆ ಏನ್ ಮಾಡೋದು ಅಂತ ತಾಯಿ ಬಳಿ ಕೇಳ್ತಾನೆ. ಆಗ ವಿಜಯಾಂಬಿಕಾ 'ನಾನು ತಮ್ಮನನ್ನೇ ಬಿಟ್ಟಿಲ್ಲ, ಇನ್ನು ಅವರು ಯಾವ ಲೆಕ್ಕ' ಎಂದು ಹೇಳಿ ಮಗನನ್ನು ಸಮಾಧಾನ ಮಾಡುತ್ತಾಳೆ.

ಟಿವಿಯಲ್ಲಿ ಬರುತ್ತಿರುವ ಸುದ್ದಿ ನೋಡಿ ದಂಗಾಗಿ ನಿಂತಿರುತ್ತಾರೆ ವಂದನಾ, ಸುಬ...