ಭಾರತ, ಮಾರ್ಚ್ 13 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 12ರ ಸಂಚಿಕೆಯಲ್ಲಿ ಸುಬ್ಬು ಬಗ್ಗೆ ಸುರೇಂದ್ರ ಹೇಳಿದ ಮಾತು ಕೇಳಿಸಿಕೊಂಡು ಅವನು ಲಲಿತಾದೇವಿಯವರ ಬಳಿ ಇರುವುದು ಗೊತ್ತಾಗಿ ತಾನೇ ಅತ್ತೆಯ ಬಳಿ ಇರುವ ವಿಚಾರ ಹೇಳುತ್ತೇನೆ ಎಂದು ಅವರ ಕೋಣೆ ಬಳಿಗೆ ಹೋಗುತ್ತಾರೆ ವೀರೇಂದ್ರ. ಆದರೆ ಅಲ್ಲಿ ಸುಬ್ಬು ಆಡಿದ ಮಾತು ಕೇಳಿದ ಅವರ ಅಭಿಪ್ರಾಯ ಬದಲಾಗುತ್ತದೆ. ಲಲಿತಾದೇವಿ ಕೋಣೆಯಲ್ಲಿ ಪಿಂಕಿ ಹಾಗೂ ಸುಬ್ಬು ಇರುತ್ತಾರೆ. ಹೀಗೆ ಮಾತನಾಡುತ್ತಿರುವಾಗ ಅವರು ಸುಬ್ಬು ಬಳಿ ಆಗ ಟಿವಿಯಲ್ಲಿ ನನ್ನ ಯಜಮಾನರು ಹಾಗೂ ವೀರು ಇರುವ ಫೋಟೊ ಹಾಕಿ ಏನೋ ಹೇಳ್ತಾ ಇದ್ರು ಅಲ್ವಾ, ಏನು ಹೇಳ್ತಾ ಇದ್ರು ನನಗೆ ಸರಿಯಾಗಿ ಕೇಳಿಸಿಲ್ಲ ಎಂದು ಸುಬ್ಬು ಬಳಿ ಕೇಳುತ್ತಾರೆ. ಅದನ್ನು ಕೇಳಿ ಸುಬ್ಬುಗೆ ಶಾಕ್ ಆದ್ರೂ ಕ್ಷಣಕಾಲದಲ್ಲಿ ಸಾವರಿಸಿಕೊಂಡು, ಅದು ಸಿರಿಗೆರೆ ಸಾಹೇಬರು ಬಂದು ಹೇಳಿದ್ರಲ್ಲಮ್ಮ ದೊಡ್ಡ ಯಜಮಾನರ ಬಗ್ಗೆ ಕಾರ್ಯಕ್ರಮ ಮಾಡಬೇಕು ಅಂತ, ಅದನ್ನೇ ಟಿವಿಯಲ್ಲಿ ತೋರಿಸ್ತಾ ಇದ್ರು. ಯಜಮಾನರಿಗೆ ದೊಡ್...