ಭಾರತ, ಮೇ 18 -- ಐಪಿಎಲ್ 2025ರ ಪಂದ್ಯಾವಳಿಯಲ್ಲಿ ಎರಡನೇ ಹಂತದ ಪಂದ್ಯಗಳು ಆರಂಭವಾಗಿದೆ. ಭಾನುವಾರ (ಮೇ 18) ಟೂರ್ನಿಯಲ್ಲಿ ಎರಡು ಪಂದ್ಯಗಳು ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಮತ್ತುಪಂಜಾಬ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಇದೇ ವೇಳೆ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಗುಜರಾತ್‌ ಟೈಟನ್ಸ್‌ ಸವಾಲು ಹಾಕಲಿದೆ. ರಾಜಸ್ಥಾನವು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲ. ಆದರೆ, ಪಂಜಾಬ್‌ ತಂಡಕ್ಕೆ ಗೆಲುವು ಅನಿವಾರ್ಯ. ಅತ್ತ ತವರಿನಲ್ಲಿ ಟೈಟನ್ಸ್‌ ಪಡೆಯನ್ನು ಎದುರಿಸುತ್ತಿರುವ ಡೆಲ್ಲಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯ.

ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡ ಇದುವರೆಗೆ ಐದು ಬಾರಿ 200 ರನ್ ಗಡಿ ದಾಟುವ ಮೂಲಕ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದೆ. ರಾಜಸ್ಥಾನ್ ರಾಯಲ್ಸ್ ಕೂಡ ನಾಲ್ಕು ಬಾರಿ 200 ಕ್ಕಿಂತ ಹೆಚ್ಚು ಸ್ಕೋರ್ ಗಳಿಸಿದೆ. ಆದರೆ ಪ್ಲೇಆಫ್‌ ತಲುಪಲು ಸಾಧ್ಯವಾಗಿಲ್ಲ.

ಜೈಪುರ ಪಿಚ್‌ ನಿಧಾನವಾಗಿರುವ ನಿರೀಕ್ಷೆ ಇದೆ...