Bengaluru, ಏಪ್ರಿಲ್ 22 -- ಏಪ್ರಿಲ್ 19ರಂದು ಜೈಪುರದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಐಪಿಎಲ್‌ ಪಂದ್ಯವು ನಾಟಕೀಯ ಅಂತ್ಯ ಕಂಡಿತು. ಪಂದ್ಯದಲ್ಲಿ ರಾಜಸ್ಥಾನ ತಂಡವು ಪಂದ್ಯದ ಕೊನೆಯ ಹಂತದಲ್ಲಿ 2 ರನ್‌ಗಳಿಂದ ಸೋಲು ಕಂಡಿತು. ಈ ಎಲ್ಲದರ ನಡುವೆ ರಾಜಸ್ಥಾನ ತಂಡವು ಹೊಸ ವಿವಾದದಲ್ಲಿ ಸಿಲುಕಿದೆ. ಎಲ್ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಆರ್‌ಆರ್ ತಂಡ ಮ್ಯಾಚ್ ಫಿಕ್ಸಿಂಗ್ ಮಾಡಿದೆ ಎಂಬ ಆರೋಪ ಎದುರಿಸುತ್ತಿದೆ. ಇದು ಮತ್ತೊಮ್ಮೆ ಐಪಿಎಲ್‌ನಲ್ಲಿ ಹೊಸ ವಿವಾದ ಹುಟ್ಟುಹಾಕಿದೆ.

ರಾಹುಲ್‌ ದ್ರಾವಿಡ್ ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಸಂಜು ಸ್ಯಾಮ್ಸನ್‌ ನಾಯಕ. ಐಪಿಎಲ್ 2025ರ ಅಂಕಪಟ್ಟಿಯಲ್ಲಿ ತಂಡವು ಸದ್ಯ ಎಂಟನೇ ಸ್ಥಾನದಲ್ಲಿದೆ. ಆಡಿದ ಎಂಟು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಆರು ಸೋಲುಗಳು ಸೇರಿದಂತೆ ಕೇವಲ ನಾಲ್ಕು ಅಂಕ ಮಾತ್ರ ಪಡೆದಿದೆ. ಈ ನಡುವೆ ತಂಡದ ಮೇಲೆ ಫಿಕ್ಸಿಂಗ್‌ ಆರೋಪ ಬಂದಿದೆ.

ಸುದ್ದಿಸಂಸ್ಥೆ ನ್ಯೂಸ್ 18 ಜೊತೆ ಮಾತನಾಡಿದ ರಾಜಸ್ಥ...