ಭಾರತ, ಮಾರ್ಚ್ 20 -- ಐಪಿಎಲ್ 2025ರ ಆವೃತ್ತಿಯ ಆರಂಭಕ್ಕೂ ಮುನ್ನ ವಿವಿಧ ತಂಡಗಳಿಂದ ಹೊಸ ಹೊಸ ಅಪ್ಡೇಟ್‌ಗಳು ಸಿಗುತ್ತಿವೆ. ಇದೀಗ ರಾಜಸ್ಥಾನ್‌ ರಾಯಲ್ಸ್‌ ಬಳಗದಲ್ಲೂ ಮಹತ್ವದ ಬದಲಾವಣೆಯೊಂದು ಆಗಿದೆ. ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್‌ ತಂಡವನ್ನು ಯುವ ಆಟಗಾರ ರಿಯಾನ್ ಪರಾಗ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಈ ಕುರಿತು ಫ್ರಾಂಚೈಸಿ ಗುರುವಾರ (ಮಾ.20) ತಿಳಿಸಿದೆ. ಸದ್ಯ ತಂಡದ ನಿಯಮಿತ ನಾಯಕ ಸಂಜು ಸ್ಯಾಮ್ಸನ್ ಸಂಪೂರ್ಣ ಫಿಟ್‌ ಆಗಿಲ್ಲ. ಹೀಗಾಗಿ ಅವರು ಮತ್ತೆ ಫಿಟ್‌ ಆಗುವವರೆಗೂ, ಮೊದಲ ಮೂರು ಪಂದ್ಯಕ್ಕೆ ಪರಾಗ್‌ ನಾಯಕನಾಗಿರಲಿದ್ದಾರೆ.

ಸಂಜು ಪಂದ್ಯಗಳಿಂದ ಹೊರಬಿದ್ದಿಲ್ಲ. ಅವರು ಎಂದಿನಂತೆ ತಂಡದ ಆಡುವ ಬಳಗದಲ್ಲಿ ಸ್ಥಾನ ಪಡೆದು ಬ್ಯಾಟಿಂಗ್ ಮಾಡಲಿದ್ದಾರೆ. ಆದರೆ, ವಿಕೆಟ್ ಕೀಪಿಂಗ್ ಕರ್ತವ್ಯಗಳಿಗೆ ಫಿಟ್‌ ಆಗಿಲ್ಲ. ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ, ಧ್ರುವ್ ಜುರೆಲ್ ರಾಯಲ್ಸ್ ಪರ ಮೊದಲ ಮೂರು ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ.

ಮೊದಲ ಮೂರು ಪಂದ್ಯಗಳಿಗೆ ನೂತನ ನಾಯಕನ ಘೋಷಣೆ ಕರಿ...