ಭಾರತ, ಫೆಬ್ರವರಿ 3 -- ರಾಜಸ್ಥಾನ ಭಾರತದ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಪ್ರಾಚೀನ ಕಟ್ಟಡಗಳು, ರಾಜಮನೆತನಗಳು ಮತ್ತು ಅರಮನೆಗಳಿಗೆ ಹೆಸರುವಾಸಿಯಾಗಿದೆ. ಶ್ರೀಮಂತ ಇತಿಹಾಸದ ಸಂಕೇತಗಳಾದ ರಾಜಸ್ಥಾನದ ಭವ್ಯವಾದ ಅರಮನೆಗಳು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಆದರೆ, ಈ ಸ್ಥಳಗಳು ಎಷ್ಟೇ ಸುಂದರವಾಗಿದ್ದರೂ, ಇವುಗಳನ್ನು ದೆವ್ವಗಳು ಆವರಿಸಿವೆ ಎಂದೂ ಹೇಳಲಾಗುತ್ತದೆ. ನೀವು ರಾಜಸ್ಥಾನಕ್ಕೆ ಟ್ರಿಪ್‌ ಮಾಡುವ ಪ್ಲಾನ್ ಇದ್ದು, ಸಾಹಸ ನಿಮಗೆ ಇಷ್ಟವಾದರೆ ದೆವ್ವಗಳಿಂದ ಪ್ರಸಿದ್ಧಿ ಪಡೆದಿರುವ ಈ ಸ್ಥಳಗಳಿಗೂ ಭೇಟಿ ನೀಡಿ.

ತನ್ನ ಭಯಾನಕ ಇತಿಹಾಸಕ್ಕೆ ಹೆಸರುವಾಸಿಯಾದ ಭಾಂಗರ್ ಕೋಟೆಯು ರಾಜಸ್ಥಾನದಲ್ಲಿ ಮಾತ್ರವಲ್ಲದೆ ಇಡೀ ಭಾರತದಲ್ಲಿಯೇ ಅತ್ಯಂತ ಭಯಾನಕ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಸ್ಥಳವು ಒಂದು ಕುತೂಹಲಕಾರಿ ಕಥೆಯನ್ನು ಹೊಂದಿದೆ. ಇಲ್ಲಿನ ಒಬ್ಬ ತಂತ್ರಜ್ಞನಿಗೆ ರಾಜಕುಮಾರಿ ಮೇಲೆ ಪ್ರೀತಿ ಹುಟ್ಟಿತು ಎಂದು ಹೇಳಲಾಗುತ್ತದೆ. ತಂತ್ರಿಯು ಮಾಟಮಂತ್ರ ಬಳಸಿ ರಾಜಕುಮಾರಿಯನ್ನು ಪಡೆಯಲು ಬಯಸಿದನು. ಆದರೆ, ರಾಜಕುಮಾರಿಗೆ ಈ ...