ಭಾರತ, ಫೆಬ್ರವರಿ 8 -- ದೆಹಲಿಯಲ್ಲಿ ತಗ್ಗೋದೇ ಇಲ್ಲ ಎನ್ನುತ್ತಿದ್ದ ಆಮ್ ಆದ್ಮಿ ಪಕ್ಷವು ಇದೀಗ ಬಿಜೆಪಿಗೆ ದಾರಿ ಬಿಟ್ಟುಕೊಟ್ಟಿದೆ. ಕಾಂಗ್ರೆಸ್‌ ಗಳಿಸಿದ ಸ್ಥಾನಗಳು ಕಡಿಮೆ ಇರಬಹುದು. ಆದರೆ ಆಪ್ ಸೋಲಿನಲ್ಲಿ ಕಾಂಗ್ರೆಸ್ ವಹಿಸಿದ ಪಾತ್ರವನ್ನು ಯಾರೂ ಅಲ್ಲಗಳೆಯಲಾರರು. ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಯ ಫಲಿತಾಂಶದ ಬಗ್ಗೆ ಸಹಜವಾಗಿ ಇಡೀ ದೇಶದ ಗಮನ ಇತ್ತು. ಈ ಫಲಿತಾಂಶದ ಪ್ರಭಾವ ಮತ್ತು ಪರಿಣಾಮ ಸಹಜವಾಗಿಯೇ ಹಲವು ರಾಜ್ಯಗಳ ಮೇಲೆಯೂ ಇರುತ್ತದೆ. ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶವು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಮತ್ತು ಬಿಜೆಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಮೇಲೆ ಹೇಗಿರುತ್ತದೆ ಎನ್ನುವ ಪಕ್ಷಿನೋಟ ಇಲ್ಲಿದೆ.

ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ಪ್ರಬಲ ಸ್ಥಳೀಯ ಪ್ರಭಾವಿ ಮುಖವಿಲ್ಲದೆ ದೆಹಲಿ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಎದುರಿಸಿತು ಎನ್ನುವುದನ್ನು ನಾವು ಗಮನಿಸಬೇಕು. ರಾಷ್ಟ್ರಮಟ್ಟದ ವಿಚಾರ, ರಾಷ್ಟ್ರಮಟ್ಟದ ನಾಯಕರನ್ನು ಮುಂದಿಟ್ಟು ಚುನಾವಣೆಗಳನ್ನು ಎದುರಿಸುವ ತಂತ್ರಗಾರಿಕೆ ಬಿಜೆಪಿ ಪಾಲಿಗೆ ಲ...