ಭಾರತ, ಫೆಬ್ರವರಿ 21 -- ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ದೊರಕಬೇಕೆಂಬ ದೃಷ್ಟಿಯಿಂದ ಕಳೆದ ಮೂರು ವರ್ಷಗಳ ಹಿಂದಷ್ಟೇ ಕಾರ್ಯ ಆರಂಭಿಸಿದ್ದ 7 ವಿಶ್ವವಿದ್ಯಾಲಯಗಳ ಜೊತೆಗೆ ನೃಪತು೦ಗ ಹಾಗೂ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯಗಳನ್ನು ಮುಚ್ಚುವುದಾಗಿ ರಾಜ್ಯ ಸರ್ಕಾರ ಹೇಳಿರುವುದು ಶಿಕ್ಷಣ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ನಿರ್ಣಯ ರಾಜಕೀಯ ಪ್ರೇರಿತವಾದದ್ದು, ನೂತನವಾಗಿ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಲ್ಲ. ನೂತನ ವಿಶ್ವವಿದ್ಯಾಲಯದ ಸ್ವಾಮ್ಯಕ್ಕೊಳಪಡದೆ ಹಳೆಯ ವಿಶ್ವವಿದ್ಯಾಲಯವೇ ಬೇಕೆಂದು ವಿದ್ಯಾರ್ಥಿಗಳು ಮನವಿಯನ್ನಿಟ್ಟಿರುವುದು, ರಾಜ್ಯ ಸರ್ಕಾರ ಉಚಿತ ಭಾಗ್ಯಗಳ ಕಾರಣ ಎದುರಿಸುತ್ತಿರುವ ಹಣಕಾಸಿನ ಮುಗ್ಗಟ್ಟು... ಹೀಗೆ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹಲವು ಕಾರಣಗಳು ಪ್ರಚಲಿತದಲ್ಲಿವೆ. ಸರ್ಕಾರ ತಾನು ರಚಿಸಿದ ಸಮಿತಿಯ ಸಲಹೆ ಮೇರೆಗೆ ತೆಗೆದುಕೊಂಡ ಈ ನಿಲುವಿನ ಕುರಿತ ಶಿಕ್ಷಣ ತಜ್ಞರ/ ಆಸಕ್ತರ ನಡುವೆ ಪರ ಮತ್ತು ವಿರೋಧದ ಚರ್ಚೆಗಳೂ, ವಿದ್ಯಾರ್ಥಿ ಸಂಘಟನೆ...