ಭಾರತ, ಜನವರಿ 30 -- ರಾಗಿ ತಿಂದವನು ನಿರೋಗಿ ಎಂಬ ಮಾತಿದೆ. ಹಿಂದೆಲ್ಲಾ ಬಡವರ ಆಹಾರವಾಗಿದ್ದ ರಾಗಿಯನ್ನು ಇಂದು ಸಿರಿವಂತರು ಕೂಡ ತಿನ್ನುತ್ತಾರೆ. ಯಾಕೆಂದರೆ ಇದರಲ್ಲಿರುವ ಪೌಷ್ಟಿಕಾಂಶದ ಮೌಲ್ಯವನ್ನು ಅರಿತ ಜನ ರಾಗಿಯತ್ತ ಮೊರೆ ಹೋಗಿದ್ದಾರೆ. ಮಧ್ಯಾಹ್ನ ಅಥವಾ ರಾತ್ರಿಯೂಟಕ್ಕೆ ಬಹುತೇಕ ಮಂದಿಗೆ ರಾಗಿ ಮುದ್ದೆ ಬೇಕೇ ಬೇಕು. ಕೇವಲ ಮುದ್ದೆಯಾಗಿ ಮಾತ್ರವಲ್ಲ ರಾಗಿ ಮಾಲ್ಟ್, ರಾಗಿ ಅಂಬಲಿ ಇತ್ಯಾದಿ ತಯಾರಿಸಿಯೂ ಸೇವಿಸುತ್ತಾರೆ.

ರಾಗಿಯು ಪೌಷ್ಟಿಕಾಂಶದಿಂದ ಹೇರಳವಾಗಿದೆ. ಇದು ಕಾರ್ಬೋಹೈಡ್ರೇಟ್‌ಗಳ (ಮುಖ್ಯವಾಗಿ ಪಿಷ್ಟ), ನಾರಿನಂಶ ಮತ್ತು ಪ್ರೋಟೀನ್‌ಗಳ ಸಮೃದ್ಧ ಮೂಲವಾಗಿದೆ. ಇತರ ಧಾನ್ಯಗಳಿಗೆ ಹೋಲಿಸಿದರೆ ರಾಗಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಮತ್ತು ಕಡಿಮೆ ಮಟ್ಟದ ಕೊಬ್ಬನ್ನು ಹೊಂದಿದೆ. ಹೀಗಾಗಿ ತೂಕ ಇಳಿಕೆಗೂ ಇದು ನೆರವಾಗುತ್ತದೆ.

ನಾರಿನಂಶ ಅಧಿಕವಾಗಿದೆ: ರಾಗಿಯು ಆಹಾರದ ನಾರಿನ ಅತ್ಯುತ್ತಮ ಮೂಲವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಜೀರ್ಣಾಂಗವ್ಯೂಹದ ಮೂಲಕ ತ್ಯಾಜ್ಯವನ್ನು ಸುಲಭವಾಗಿ ಸಾಗಿಸಲು ಅನುಕ...