ಭಾರತ, ಮೇ 14 -- ಕಾಮಿಡಿ ಕಿಲಾಡಿಗಳು ಸೀಸನ್‌ 3 ವಿನ್ನರ್‌ ರಾಕೇಶ್‌ ಪೂಜಾರಿ ಅನಿರೀಕ್ಷಿತವಾಗಿ ಅಗಲಿರುವುದರಿಂದ ಅವರ ಆಪ್ತರು, ಸ್ನೇಹಿತರು ಬೇಸರದಲ್ಲಿದ್ದಾರೆ. ಇದೇ ಸಮಯದಲ್ಲಿ ಅಗಲಿದ ಆತ್ಮೀಯನ ಕುಟುಂಬದ ಕುರಿತೂ ಕಾಮಿಡಿ ಕಿಲಾಡಿ ಗೆಳೆಯರು ಯೋಚಿಸುತ್ತಿದ್ದಾರೆ. "ಕಾಮಿಡಿ ಕಿಲಾಡಿಗಳು ಶೋನಿಂದ ಆಗಮಿಸಿರುವ ನಾವೆಲ್ಲರೂ ಒಂದು ಫ್ಯಾಮಿಲಿ ರೀತಿ ಇದ್ದೇವೆ. ಗೆಳೆಯನ ತಂಗಿ ಮದುವೆಗೆ ನಾವೆಲ್ಲರೂ ಸಹಯಾ ಮಾಡುತ್ತೇವೆ" ಎಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು ಹೇಳಿದ್ದಾರೆ.

"ನಿನ್ನೆ ಕೆಆರ್‌ ಪೇಟೆ ಶಿವಣ್ಣ ಮಾತನಾಡುತ್ತಿದ್ದರು. ನಾವೆಲ್ಲರೂ ಇದ್ದೇವೆ ಅಂದರು. ನಾವೆಲ್ಲರೂ ಇವರ ಜತೆ ಇರುತ್ತೇವೆ. ಹಣಕಾಸು ವಿಚಾರದಲ್ಲಿ ಆಗಿರಲಿ. ಯಾವುದೇ ಸಪೋರ್ಟ್‌ಗೆ ಇರುತ್ತೇವೆ. ನಿನ್ನೆ ತೀರಿ ಹೋಗಿರುವ ವಿಚಾರ ಅಂತ ಅಲ್ಲ. ಕಾಮಿಡಿ ಕಿಲಾಡಿಯಿಂದ ಬಂದ ನಾವೆಲ್ಲರೂ ಫ್ಯಾಮಿಲಿ ರೀತಿ ಇದ್ದೇವೆ. ಯಾರಿಗೆ ಏನೇ ಸಮಸ್ಯೆ ಆದರೂ ನಮ್ಮ ಕೈಯಲ್ಲಿ ಆಗುವಷ್ಟು ಎಲ್ಲರೂ ಸಹಾಯ ಮಾಡುತ್ತೇವೆ" ಎಂದು ಟಿವಿ ನೈನ್‌ಗೆ ನೀಡಿದ ಸಂದರ್ಶನದಲ್ಲಿ ಸೀರುಂಡ...