ಭಾರತ, ಮೇ 13 -- ಕಾಮಿಡಿ ಕಿಲಾಡಿಗಳು ಸೀಸನ್‌ 3ರಲ್ಲಿ ಗೆಲುವು ಪಡೆದ ರಾಕೇಶ್‌ ಪೂಜಾರಿ ಅನಿರೀಕ್ಷಿತ ಸಾವಿನ ದುಃಖದಲ್ಲಿ ಅವರ ಆಪ್ತರಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ತಮ್ಮ ಗೆಳೆಯನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ರಾಕೇಶ್‌ ಪೂಜಾರಿ ‌ ಆಪ್ತ ಗೆಳೆಯನೊಬ್ಬ ಇನ್‌ಸ್ಟಾಗ್ರಾಂನಲ್ಲಿ ಪರೋಕ್ಷವಾಗಿ ಕಾಂತಾರ ಚಿತ್ರತಂಡವನ್ನು ಸೂಚಿಸಿ ತನ್ನ ಬೇಸರ‌ ವ್ಯಕ್ತಪಡಿಸಿದ್ದಾನೆ.

"ನಮ್ಮ ಸಿನಿಮಾ ನಮ್ಮ ಸಿನಿಮಾ ಅಂದವರು.. ಅವರ ಸಿನಿಮಾದಲ್ಲಿ ಕೆಲಸ ಮಾಡಿದ ಕಲಾವಿದ ಇನ್ನಿಲ್ಲ ಎಂದಾಗ.. ಅವರು ಮಾಡಿದ್ದು ಸಂತಾಪವಲ್ಲ... ಬದಲಿಗೆ ಶೂಟಿಂಗ್‌. ಎಂತಾ ಅವಸ್ಥೆ. ಕಮರ್ಷಿಯಲ್‌ ಮೈಂಡ್‌ನಲ್ಲಿ ಕಲಾವಿದನಿಗೆ ಬೆಲೆ ಇಲ್ಲಾ" ಎಂದು ಪ್ಯಾಂಕ್‌ ಪ್ಯಾಂಕ್‌ ಖ್ಯಾತಿಯ ರಿತೇಶ್‌ ಸೋಷಿಯಲ್‌ ಮೀಡಿಯಾದಲ್ಲಿ ಬೇಸರದಲ್ಲಿ ಸ್ಟೇಟಸ್‌ ಹಾಕಿಕೊಂಡಿದ್ದಾರೆ.

ಈ ಮೂಲಕ ಕಾಂತಾರ ಸಿನಿಮಾ ತಂಡವನ್ನು ರಿತೇಶ್‌ ನೆನಪಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಟಿಸಿದ ಕಲಾವಿದರೊಬ್ಬರು ಮೃತಪಟ್ಟ ಸಮಯದಲ್ಲಿ ಚಿತ್ರತಂಡವು ಶೂಟಿಂಗ್‌ ಮುಂದುವರೆಸಿದೆ ಎಂದು ಅವರು...