ಭಾರತ, ಮಾರ್ಚ್ 9 -- ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಸಿನಿಮಾ ಟಾಕ್ಸಿಕ್ ಬಗ್ಗೆ ಕಾತರತೆ ಹೆಚ್ಚಾಗಿದೆ. ಹಲವು ತಿಂಗಳಿನಿಂದ ಶೂಟಿಂಗ್ ನಡೆಯುತ್ತಿದ್ದು, ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬುದೇ ಎಲ್ಲರ ಪ್ರಶ್ನೆಯಾಗಿದೆ. ಕೆಲ ಮಾಹಿತಿಗಳ ಪ್ರಕಾರ ಶೀಘ್ರದಲ್ಲೇ ದಿನಾಂಕ ಬಹಿರಂಗಗೊಳ್ಳಲಿದೆ. ರಾಕಿಂಗ್ ಸ್ಟಾರ್ ಯಶ್ ಅವರನ್ನು ತೆರೆಯ ಮೇಲೆ ಕಾಣಲು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರತಂಡದಿಂದ ಬರುವ ಅಧಿಕೃತ ಮಾಹಿತಿಗಾಗಿ ಕಾಯುತ್ತಿದ್ದಾರೆ.

ಚಿತ್ರೀಕರಣ ಆರಂಭವಾಗಿ ಸಾಕಷ್ಟು ದಿನಗಳಾಗಿದ್ದರೂ ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ. ಚಿತ್ರತಂಡವು ಆರಂಭದಲ್ಲಿ ಈ ಸಿನಿಮಾ ಏಪ್ರಿಲ್ 10, 2025 ರಂದು ಬಿಡುಗಡೆಯಾಗುತ್ತದೆ ಎಂದು ತಿಳಿಸಿತ್ತು. ಆದರೆ ಚಿತ್ರೀಕರಣದ ಪ್ರಾರಂಭ ಮತ್ತು ನಂತರದ ಪ್ರಗತಿ ವಿಳಂಬವಾದ ಕಾರಣ, ಆ ದಿನಾಂಕದಂದು ಸಿನಿಮಾ ಬಿಡುಗಡೆಯಾವುದು ಅನುಮಾನ ಎಂಬಂತಾಯಿತು. ಏಪ್ರಿಲ್ 10ರಂದು ಸಿನಿಮಾ ಬಿಡುಗಡೆಯಾಗುವುದಿಲ್ಲ ಎಂದು ಯಶ್ ಸ್ಪಷ್ಟಪಡಿ...