Bengaluru, ಮಾರ್ಚ್ 6 -- ಬೆಂಗಳೂರು: ಕನ್ನಡದ ಮಾಣಿಕ್ಯ ಮತ್ತು ಪಟಾಕಿ ಸಿನಿಮಾಗಳಲ್ಲಿ ನಟಿಸಿದ್ದ ನಟಿ ರನ್ಯಾ ರಾವ್‌ ಈಗ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ತನಿಖಾಧಿಕಾರಿಗಳ ವಶದಲ್ಲಿದ್ದಾರೆ. ಇಂದು ಈಕೆಯ ಜಾಮೀನು ಅರ್ಜಿಯ ವಿಚಾರಣೆಯೂ ನಡೆಯಲಿದೆ. ಇದೇ ಸಮಯದಲ್ಲಿ ನಟಿ ರನ್ಯಾ ರಾವ್‌ ದುಬೈನಿಂದ ಹೇಗೆ ಚಿನ್ನ ತರುತ್ತಿದ್ದರು ಎಂಬ ಕುರಿತಾದ ರೋಚಕ ವಿವರಗಳೂ ದೊರಕುತ್ತಿವೆ. ಈಕೆ ಚಿನ್ನ ತರಲು ರಹಸ್ಯ ಜಾಕೆಟ್‌ ಮಾಡಿಕೊಂಡಿದ್ದಳು. ತನಿಖಾಧಿಕಾರಿಗಳ ಕಣ್ತಪ್ಪಿಸಿ ವಿಮಾನ ನಿಲ್ದಾಣದಿಂದ ಹೊರಬರಲು ಪೊಲೀಸ್‌ ಕಾನ್ಸ್‌ಟೇಬಲ್‌ಗಳ ಬೆಂಬಲ ಪಡೆಯುತ್ತಿದ್ದಳು ಎಂಬ ವಿವರವೂ ಈಗ ಲಭ್ಯವಾಗಿದೆ.

ವಿಶೇಷವಾಗಿ ಮಾರ್ಪಡಿಸಿದ ಬಾಡಿ-ಜಾಕೆಟ್ ಒಳಗೆ ಬಚ್ಚಿಟ್ಟಿದ್ದ 12.56 ಕೋಟಿ ರೂ. ಮೌಲ್ಯದ 14.8 ಕೆಜಿ ವಿದೇಶಿ ಮೂಲದ ಚಿನ್ನವನ್ನು ಈಕೆಯಿಂದ ವಶಪಡಿಸಿಕೊಳ್ಳಲಾಗಿದೆ. ಅಂದರೆ, ಚಿನ್ನ ಸಾಗಾಟಕ್ಕಾಗಿ ವಿಶೇಷ ಜಾಕೆಟ್‌ ಬಳಸುತ್ತಿದ್ದರು. ಈಕೆಯ ಬಂಧನವು ಸಾಕಷ್ಟು ಆಘಾತವನ್ನೂ ಉಂಟು ಮಾಡಿತ್ತು. ಇದಕ್ಕೆ, ಈಕೆ ನಟಿ ಎನ್ನುವುದು ಒಂದು ಕಾರಣವಾದರೆ, ಹ...