ಭಾರತ, ಫೆಬ್ರವರಿ 10 -- ರವೆ ರೊಟ್ಟಿ, ರವೆ ಲಾಡೂ, ರವೆಯಿಂದ ತಯಾರಿಸಲಾಗುವ ಕೇಸರಿಬಾತ್, ಇತ್ಯಾದಿ ಸಿಹಿ-ಮಸಾಲೆಯುಕ್ತ ಖಾದ್ಯಗಳನ್ನು ರವೆಯಿಂದ ತಯಾರಿಸಿ ತಿಂದಿರಬಹುದು. ಇವು ಆರೋಗ್ಯಕರ ಮಾತ್ರವಲ್ಲ ಬಹಳ ರುಚಿಯಾಗಿರುತ್ತದೆ. ಇಲ್ಲಿ ರವೆ ಮತ್ತು ಹಾಲಿನ ರಸಗುಲ್ಲ ಪಾಕವಿಧಾನ ನೀಡಲಾಗಿದೆ. ಕೇವಲ ಹಾಲಿನಿಂದ ತಯಾರಿಸಿಗ ರಸಗುಲ್ಲ ಅಥವಾ ಕ್ಯಾರೆಟ್ ರಸಗುಲ್ಲವನ್ನು ನೀವು ತಿಂದಿರಬಹುದು. ಆದರೆ, ರವೆ ಬೆರೆಸಿ ತಯಾರಿಸಲಾಗುವ ರಸಗುಲ್ಲವನ್ನು ಎಂದಾದರೂ ಪ್ರಯತ್ನಿಸಿದ್ದೀರಾ? ಇಲ್ಲವಾದಲ್ಲಿ ಇಂದೇ ಪ್ರಯತ್ನಿಸಿ.

ರವೆಯಿಂದ ತಯಾರಿಸಲಾಗುವ ರಸಗುಲ್ಲವು ಬಹಳ ಸರಳ ಹಾಗೂ ತ್ವರಿತ ಸಿಹಿತಿಂಡಿಯಾಗಿದ್ದು, ಇದನ್ನು ನೀವು ಯಾವಾಗ ಬೇಕಾದರೂ ತಯಾರಿಸಿ ತಿನ್ನಬಹುದು. ಹಬ್ಬಗಳು, ಶುಭ ಕಾರ್ಯಕ್ರಮಗಳು ಒಂದೊಂದಾಗಿ ಪ್ರಾರಂಭವಾಗುತ್ತಿದೆ. ಹೀಗಾಗಿ ನೀವು ಖಂಡಿತ ರಸಗುಲ್ಲ ರೆಸಿಪಿಯನ್ನು ಪ್ರಯತ್ನಿಸಲೇಬೇಕು. ರವೆ, ಹಾಲಿನಿಂದ ರಸಗುಲ್ಲ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: ರವೆ- ಅರ್ಧ ಕಪ್, ಸಕ್ಕರೆ- ಕಾ...