Bangalore, ಏಪ್ರಿಲ್ 23 -- ರವಿಚಂದ್ರನ್‌ ಕನ್ನಡದ ಪ್ರತಿಭಾನ್ವಿತ ನಟ ನಿರ್ದೇಶಕರಾಗಿ ಖ್ಯಾತಿ ಪಡೆದಿದ್ದಾರೆ. ಅವರ ಸಿನಿ ಸಾಹಸಗಳಲ್ಲಿ ಶಾಂತಿ ಕ್ರಾಂತಿ ಸಿನಿಮಾವನ್ನು ಮರೆಯುವಂತೆ ಇಲ್ಲ. ಕೆಲವೊಮ್ಮೆ ಬಿಗ್‌ ಬಜೆಟ್‌ ಸಿನಿಮಾಗಳು ಬಾಕ್ಸ್‌ಆಫೀಸ್‌ನಲ್ಲಿ ಸೂಪರ್‌ಹಿಟ್‌ ಆಗಬೇಕೆಂದಿಲ್ಲ. 1991ರಲ್ಲಿ ಬಿಡುಗಡೆಯಾದ ಪ್ಯಾನ್‌ ಇಂಡಿಯಾ ಸಿನಿಮಾ "ಶಾಂತಿ ಕ್ರಾಂತಿ" ಇದಕ್ಕೆ ಸೂಕ್ತ ಉದಾಹರಣೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ರಜನಿಕಾಂತ್‌, ನಾಗಾರ್ಜುನಾ ಮತ್ತು ಜೂಹಿ ಚಾಹ್ಲಾ ಎಂಬ ಮೂವರು ಸೂಪರ್‌ಸ್ಟಾರ್‌ಗಳು ಈ ಸಿನಿಮಾದಲ್ಲಿ ನಟಿಸಿದ್ದರು. ಕನ್ನಡ ನಟ ಮತ್ತು ನಿರ್ದೇಶಕ ವಿ ರವಿಚಂದ್ರನ್‌ ಈ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದರು. ಇದು ಇವರದ್ದೇ ನಿರ್ಮಾಣದ ಸಿನಿಮಾ. ಕನ್ನಡ ವರ್ಷನ್‌ ಶಾಂತಿ ಕ್ರಾಂತಿಯಲ್ಲಿ ರವಿಚಂದ್ರನ್‌ ನಟಿಸಿದ್ದರು. ತೆಲುಗು ಭಾಷೆಯಲ್ಲಿ ನಾಗಾರ್ಜುನಾ‌ ನಟಿಸಿದ್ದರು. ಹಿಂದಿ ಮತ್ತು ತಮಿಳು ಭಾಷೆಯಲ್ಲ ರಜನಿಕಾಂತ್‌ ನಟಿಸಿದ್ದರು. ಜೂಹಿ ಚಾಹ್ಲಾ, ಖುಷ್...