Bengaluru, ಏಪ್ರಿಲ್ 5 -- ಸರಳ ಸೀರೆಯನ್ನು ಆಕರ್ಷಕವಾಗಿ ಕಾಣಿಸಲು ರವಿಕೆಯ ವಿನ್ಯಾಸವನ್ನು ಪ್ರಯೋಗಿಸಬಹುದು. ಕುಪ್ಪಸವನ್ನು ನೀರಸವಾಗಿ ಹೊಲಿದರೆ ಸೀರೆಯ ಸೌಂದರ್ಯವೇ ಹಾಳಾಗುತ್ತದೆ. ಹೀಗಾಗಿ ರವಿಕೆಯ ನೆಕ್‍ಲೈನ್ ಮತ್ತು ಹಿಂಭಾಗದ ವಿನ್ಯಾಸವನ್ನು ಸುಂದರವಾಗಿ ಹೊಲಿಸುತ್ತಾರೆ. ಕೇವಲ ಇವಿಷ್ಟೇ ಅಲ್ಲ, ತೋಳುಗಳ ವಿನ್ಯಾಸವನ್ನೂ ಸುಂದರವಾಗಿ ಹೊಲಿಸುವುದು ಮುಖ್ಯ. ತೋಳುಗಳ ಈ ವಿನ್ಯಾಸವು ನಿಮಗೆ ಆಕರ್ಷಕ ನೋಟವನ್ನು ನೀಡುತ್ತದೆ.

ದಿನನಿತ್ಯದ ಸೀರೆಗಳಿಗೆ ಬ್ಲೌಸ್ ಹೊಲಿಯುತ್ತಿದ್ದರೆ, ತೋಳುಗಳನ್ನು ಈ ರೀತಿ ಹೊಲಿಸಬಹುದು. ಈ ವಿನ್ಯಾಸವು ಸಾಕಷ್ಟು ವಿಶಿಷ್ಟ, ಸರಳ ಮತ್ತು ಸೊಗಸಾಗಿ ಕಾಣುತ್ತದೆ. ಬೇಸಿಗೆಯ ಬಿಸಿಲಿನಲ್ಲೂ ನಿಮಗೆ ಆರಾಮದಾಯಕ ಭಾವನೆಯನ್ನು ನೀಡುತ್ತದೆ.

ಪಫ್ ತೋಳುಗಳು ಸಾಕಷ್ಟು ವಿಂಟೇಜ್ ಮತ್ತು ಕ್ಲಾಸಿಯಾಗಿ ಕಾಣುತ್ತವೆ. ಮುಂಬರುವ ಬೇಸಿಗೆಯಲ್ಲಿ ನೀವು ಈ ಲುಕ್ ಅನ್ನು ಪ್ರಯತ್ನಿಸಬಹುದು. ಇವುಗಳನ್ನು ಧರಿಸಲು ತುಂಬಾ ಆರಾಮದಾಯಕವಾಗಿರುತ್ತದೆ.

ತೋಳುಗಳಿಗೆ ಸ್ಟೈಲಿಶ್ ಲುಕ್ ನೀಡಲು, ನೀವು ತೋಳುಗಳ ಮೇಲೆ ನೆಟ್ ಫ್ಯಾಬ...