ಭಾರತ, ಫೆಬ್ರವರಿ 26 -- ಚೂಡಿದಾರ್, ಲೆಹೆಂಗಾ, ಸೀರೆ ರವಿಕೆಯನ್ನು ಎಷ್ಟು ಸುಂದರವಾಗಿ ಹೊಲಿಸುತ್ತೇವೆಯೋ ಅಷ್ಟು ಚೆನ್ನಾಗಿ ಕಾಣುತ್ತದೆ. ಕೇವಲ ತೋಳು, ಮುಂಭಾಗ ಹಾಗೂ ಹಿಂಭಾಗ ವಿನ್ಯಾಸ ಮಾತ್ರವಲ್ಲ ಗೊಂಡೆ ವಿನ್ಯಾಸವನ್ನೂ ಹಾಕುವುದು ಮುಖ್ಯ. ಅದು ಚೂಡಿದಾರ್ ಅಥವಾ ಸೀರೆ ರವಿಕೆಯಾಗಿರಲಿಅವುಗಳಿಗೆ ಹೆಚ್ಚು ಅಲಂಕಾರಿಕ ಮತ್ತು ಸ್ಟೈಲಿಶ್ ಲುಕ್ ನೀಡಬೇಕು. ನಿಮ್ಮ ಉಡುಪಿಗೆ ಯಾವ ರೀತಿಯ ಗೊಂಡೆ ಅಥವಾ ಡೋರಿ ಬಗ್ಗೆ ಯೋಚಿಸುತ್ತಿದ್ದರೆ,ನೀವು ಕೆಲವು ಇತ್ತೀಚಿನ ವಿನ್ಯಾಸಗಳ ಬಗ್ಗೆ ತಿಳಿದಿರಬೇಕು. ಇಲ್ಲಿವೆ ಇತ್ತೀಚಿನ ಡಿಸೈನ್‌ನ ಗೊಂಡೆ ಅಥವಾ ಡೋರಿಗಳು.

ಎರಡು ಬಣ್ಣದಿಂದ ಗೊಂಡೆ ಡಿಸೈನ್ ಮಾಡಿ:ಚೂಡಿದಾರ್ ಅಥವಾ ಸೀರೆ ರವಿಕೆಯ ಹಿಂದೆ ವಿನ್ಯಾಸಗೊಳಿಸಲಾದ ಗೊಂಡೆಯನ್ನು ನೀವು ಮಾಡಹುದು. ಚೂಡಿದಾರ್, ರವಿಕೆಯ ಹಿಂದೆ ಈ ರೀತಿ ಗೊಂಚಲಿನಂತಿರುವ ಎರಡು ಬಣ್ಣದಿಂದ ಅಥವಾ ಕಾಂಟ್ರಾಸ್ಟ್ ಬಣ್ಣದಿಂದ ಗೊಂಡೆಯನ್ನು ಮಾಡಿ. ಇದು ತುಂಬಾ ಸುಂದರವಾಗಿ ಕಾಣುತ್ತದೆ.

ಗುಲಾಬಿ ಆಕಾರದಗೊಂಡೆ:ಈ ರೀತಿಯ ಅಲಂಕಾರಿಕ ಗುಲಾಬಿ ಆಕಾರದ ಗೊಂಡೆಯನ್ನು ಸಹ ಮಾಡಬಹ...