Bengaluru, ಮಾರ್ಚ್ 4 -- ಟ್ರೆಂಡಿ ತೋಳುಗಳ ವಿನ್ಯಾಸಗಳು:ಸೀರೆಯ ಸೊಬಗುಹೆಚ್ಚಬೇಕೆಂದರೆ ರವಿಕೆ ವಿನ್ಯಾಸವು ಬಹಳ ಮುಖ್ಯವಾಗಿರುತ್ತದೆ. ಸೀರೆ ತುಂಬಾ ಸರಳವಾಗಿದ್ದರೂ ರವಿಕೆ ತುಂಬಾ ಚೆನ್ನಾಗಿ ಹೊಲಿದಿದ್ದರೆ ನೋಡಲು ಸುಂದರವಾಗಿ ಕಾಣುತ್ತದೆ. ರವಿಕೆಯನ್ನು ಹೊಲಿಯುವ ಮೊದಲು,ಅದರ ವಿನ್ಯಾಸದ ಬಗ್ಗೆ ಗೊಂದಲವಿರುತ್ತದೆ. ಸಾಮಾನ್ಯವಾಗಿ ಬಹುತೇಕರ ಗಮನ ನೆಕ್ ಡಿಸೈನ್ ಹಾಗೂ ಬ್ಯಾಕ್ ಡಿಸೈನ್‌ನತ್ತ ಮಾತ್ರ ಯೋಚಿಸುತ್ತಾರೆ. ಆದರೆ, ತೋಳುಗಳ ವಿನ್ಯಾಸವು ಕೂಡ ಬಹಳ ಮುಖ್ಯ. ಇಲ್ಲಿವೆ ಕೆಲವು ಸ್ಲೀವ್ ವಿನ್ಯಾಸಗಳು.

ಗುಲಾಬಿ ಆಕಾರದ ಪ್ಯಾಟರ್ನ್ ಸ್ಲೀವ್‌ಗಳು:ಬ್ಲೌಸ್‌ನ ತೋಳುಗಳಿಗೆ ನೀವು ಈ ರೀತಿಯ ಗುಲಾಬಿ ಆಕಾರದಡಿಸೈನ್ ಅನ್ನು ಆಯ್ಕೆ ಮಾಡಬಹುದು. ಈ ರೀತಿಯ ತೋಳುಗಳು ಬೇಸಿಗೆಯಲ್ಲಿ ಪರಿಪೂರ್ಣವಾಗಿರುತ್ತವೆ. ಈ ಮಾದರಿಯು ಆರಾಮದಾಯಕವಾಗಿರುವುದರ ಜೊತೆಗೆ,ಸಾಕಷ್ಟು ಟ್ರೆಂಡಿಯಾಗಿಯೂ ಕಾಣುತ್ತದೆ. ನೀವು ದಿನನಿತ್ಯದ ಉಡುಗೆಗೂ ಈ ವಿನ್ಯಾಸವನ್ನು ಆಯ್ಕೆ ಮಾಡಬಹುದು.

ತೋಳುಗಳ ಮೇಲೆ ಫ್ಯಾನ್ಸಿ ಕಟ್:ತೋಳುಗಳ ಮೇಲೆ ಸರಳವಾದ ಡಿಸೈನ್ ಮಾಡುವ ಮೂಲ...