ಭಾರತ, ಫೆಬ್ರವರಿ 21 -- ಆರಂಭಿಕ ಬ್ಯಾಟರ್ ರಯಾಲ್ ರಿಕಲ್ಟನ್ ಅವರ ಭರ್ಜರಿ ಶತಕ (103) ಹಾಗೂ ಬೌಲರ್​​ಗಳ ಮಾರಕ ಬೌಲಿಂಗ್​ ದಾಳಿಯ ನೆರವಿನಿಂದ ಅಫ್ಘಾನಿಸ್ತಾನ ವಿರುದ್ಧ 107 ರನ್​​ಗಳ ಭರ್ಜರಿ ಗೆಲುವು ದಾಖಲಿಸಿದ ಸೌತ್ ಆಫ್ರಿಕಾ, ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಶುಭಾರಂಭ ಮಾಡಿದೆ. ಕರಾಚಿಯ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಜರುಗಿದ ಟೂರ್ನಿಯ 3ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸೌತ್ ಆಫ್ರಿಕಾ ತನ್ನ ನಿಗದಿತ 50 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 315 ರನ್ ಗಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಅಫ್ಘನ್ 208ಕ್ಕೆ ಆಲೌಟ್​ ಆಯಿತು.

316 ರನ್‌ಗಳ ಗುರಿಯನ್ನು ಬೆನ್ನಟ್ಟುವ ಸಂದರ್ಭದಲ್ಲಿ ಅಫ್ಘಾನಿಸ್ತಾನ ಉತ್ತಮ ಆರಂಭ ಪಡೆಯಲಿಲ್ಲ. 50 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿತು. ರಹ್ಮಾನುಲ್ಲಾ ಗುರ್ಬಾಜ್ (10), ಇಬ್ರಾಹಿಂ ಜದ್ರಾನ್ (17), ಸೆದಿಕುಲ್ಲಾ ಅಟಲ್ (16) ಮತ್ತು ಹಶ್ಮತುಲ್ಲಾ ಶಾಹಿದಿ (0) ಅವರು ಬೇಗನೇ ಔಟಾಗುವ ಮೂಲಕ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಆ ನಂತರ ಕೂಡ ತಂಡ ಚೇತರಿಸಿಕೊಳ್ಳ...