ಭಾರತ, ಏಪ್ರಿಲ್ 8 -- ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧದ ರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ಜಯ ಸಾಧಿಸಿದೆ. ಈಡನ್‌ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರನ್‌ ಮಳೆಯೇ ಹರಿಯಿತು. ಉಭಯ ತಂಡಗಳ ನಡುವೆ 450ಕ್ಕೂ ಹೆಚ್ಚು ರನ್‌ ಬಂತು. ಎಲ್‌ಎಸ್‌ಜಿ ಗಳಿಸಿದ್ದ ಬೃಹತ್‌ ಮೊತ್ತ ಚೇಸಿಂಗ್‌ಗೆ ಇಳಿದ ಕೆಕೆಆರ್‌, ಕೊನೆಗೆ ಕೇವಲ 4 ರನ್‌ ಕೊರೆತೆಯಿಂದ ಸೋಲು ಕಂಡಿತು. ಇದರೊಂದಿಗೆ ಲಕ್ನೋ ತಂಡ 4 ರನ್‌ಗಳೊಂದಿಗೆ ಗೆದ್ದು ಪ್ರಸಕ್ತ ಆವೃತ್ತಿಯಲ್ಲಿ ಮೂರನೇ ಗೆಲುವು ಒಲಿಸಿಕೊಂಡಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಲಕ್ನೋ, ಭರ್ಜರಿ ಬ್ಯಾಟಿಂಗ್‌ ಮಾಡಿ 3 ವಿಕೆಟ್‌ ಕಳೆದುಕೊಂಡು 238 ರನ್‌ ಪೇರಿಸಿತು. ಚೇಸಿಂಗ್‌ ನಡೆಸಿದ ಕೆಕೆಆರ್‌ ಗುರಿ ಸಮೀಪ ಬಂದು ಮುಗ್ಗರಿಸಿತು. ರಿಂಕು ಪ್ರಯತ್ನದ ಹೊರತಾಗಿಯೂ 7 ವಿಕೆಟ್‌ ಕಳೆದುಕೊಂಡು 234 ರನ್‌ ಗಳಿಸಲಷ್ಟೇ ಶಕ್ತವಾಯ್ತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಎಲ್‌ಎಸ್‌ಜಿ, ಭರ್ಜರಿ ಆರಂಭ ಪಡೆಯಿತು. ಪ್ರಸಕ್ತ ಆವೃತ್ತಿಯ ಐಪಿಎಲ್‌ ಕಂಡ ಉತ್ತಮ ಆರಂಭಿಕ ಜ...