ಭಾರತ, ಮಾರ್ಚ್ 3 -- Ranveer Allahbadia: ಹೆತ್ತವರ ಖಾಸಗಿ ಕ್ಷಣಗಳ ಕುರಿತು ವಿಲಕ್ಷಣ ಹೇಳಿಕೆ ನೀಡಿದ್ದ ರಣವೀರ್ ಅಲಹಾಬಾದಿಯನಿಗೆ ಯೂಟ್ಯೂಬ್‌ ಶೋ ಪುನರಾರಂಭಿಸಲು ಸುಪ್ರೀಂ ಕೋರ್ಟ್‌ ಸೋಮವಾರ ಅನುಮತಿ ನೀಡಿದೆ. ಆನ್‌ಲೈನ್‌ ಮಾಧ್ಯಮಗಳಲ್ಲಿ ಅಶ್ಲೀಲ ವಿಷಯವನ್ನು ತಡೆಯಲು ಮತ್ತು ಕಂಟೆಂಟ್‌ ಕ್ರಿಯೆಟರ್‌ಗಳ ಸ್ವಾತಂತ್ರ್ಯವನ್ನು ರಕ್ಷಿಸಲು ನಿಯಮಗಳನ್ನು ಪರಿಚಯಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾರಿಗೆ ಬಂಧನದಿಂದ ರಕ್ಷಣೆ ನೀಡಿರುವ ನ್ಯಾಯಾಲಯವು ಪಾಡ್‌ಕ್ಯಾಸ್ಟ್ 'ಬಿಯರ್‌ಬೈಸೆಪ್ಸ್' ಪುನರಾರಂಭಿಸಲು ಅನುಮತಿ ನೀಡಿದೆ. ಈ ಸಂದರ್ಭದಲ್ಲಿ "ಸಭ್ಯತೆಯನ್ನು ಕಾಪಾಡಿಕೊಳ್ಳಬೇಕು" ಎಂದು ಷರತ್ತನ್ನು ವಿಧಿಸಿದೆ.

8 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ರಣವೀರ್ ಅಲಹಾಬಾದಿಯ ಇತ್ತೀಚೆಗೆ ಹಾಸ್ಯನಟ ಸಮಯ್ ರೈನಾ ಅವರ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಕಾರ್ಯಕ್ರಮದಲ್ಲಿ ವಿಲಕ್ಷಣ ಹೇಳಿಕೆ ನೀಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಪೊಲೀಸ್‌ ಠಾಣೆಗಳಲ್ಲಿ ದೂರ...